ಮಕ್ಕಳ ಸ್ಕಾಲರ್ಶಿಪ್ಗಿಲ್ಲ ಸರ್ಕಾರದ ಬಳಿ ಅನುದಾನ ಇನ್ನೂ ಸರ್ಕಾರಿ ಶಾಲೆಗಳನ್ನ ಸರ್ಕಾರ ಪೋಷಿಸಲು ಸಾಧ್ಯವೇ??
ಇಂತ ಚರ್ಚೆ ಈಗ ಮುನ್ನಲೆಗೆ ಬಂದಿದೆ. ಸದ್ದು ಗದ್ದಲವಿಲ್ಲದೇ ಸರ್ಕಾರಿ ಶಾಲೆಗಳನ್ನ ಮುಚ್ಚುವ ತಯಾರಿಯು ಮರೆಯಲ್ಲೇ ನಡೆಯುತ್ತಿದೆ. ಅಮೆರಿಕದ ಉತ್ಕೃಷ್ಠ ದರ್ಜೆಯ ಶಾಲೆಗಳು ಎಂದೇ ಜನಜನಿತವಾದ ಮ್ಯಾಗ್ನಟ್ ಎಂಬ ಹೆಸರಿನಲ್ಲಿ ರಾಜ್ಯ ಸರ್ಕಾರ ಏಳುನೂರು ಶಾಲೆಗಳನ್ನ ಆರಂಭಿಸಲು ತಯಾರಿ ನಡೆಸಿದೆ.
ಕಡಿಮೆ ವಿದ್ಯಾರ್ಥಿಗಳನ್ನು ಹೊಂದಿರುವ ಅದರಲ್ಲೂ ಆರು ಕಿ.ಮೀ. ವ್ಯಾಪ್ತಿಯಲ್ಲಿ ಬರುವ ಶಾಲೆಗಳನ್ನು ಒಟ್ಟುಗೂಡಿಸಿ ಮ್ಯಾಗ್ನಟ್ ಶಾಲೆಗಳನ್ನಾಗಿ ಪರಿವರ್ತಿಸುವ ತೀರ್ಮಾನಕ್ಕೆ ಸರ್ಕಾರ ಬಂದಿದೆ. ಈ ಕುರಿತು ಶಿಕ್ಷಣ ಇಲಾಖೆ ನೀಡಿದ ಪ್ರಸ್ತಾವನೆಗೂ ರಾಜ್ಯ ಸರ್ಕಾರ ಸಮ್ಮತಿಸಿದೆ.
ಸರ್ಕಾರದ ಧೋರಣೆಗೆ ಶಿಕ್ಷಣ ತಜ್ಞರು ಪೋಷಕರು ಹಾಗೂ ವಿದ್ಯಾರ್ಥಿ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಕೆಲ ಜನಾಭಿಪ್ರಾಯ ವ್ಯಕ್ತವಾಗಿದ್ದು, ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಮಕ್ಕಳ ವಿದ್ಯಾರ್ಥಿ ವೇತನ ಪಾವತಿಗೆ ಸರ್ಕಾರದ ಬಳಿ ಅನುದಾನ ಕೊರತೆ ಎದುರಾಗಿದೆ ಇದರಿಂದ ಅರ್ಹ ವಿದ್ಯಾರ್ಥಿಗಳು ಶಿಕ್ಷಣ ಮೊಟಕುಗೊಳ್ಳುವ ಆತಂಕ ಎದುರಾಗಿದೆ ಎಂದಿದ್ದಾರೆ. ಇಂತಹ ಸರ್ಕಾರ ಸರ್ಕಾರಿ ಶಾಲೆಗಳನ್ನ ಪೋಷಿಸಲು ಸಾಧ್ಯವೆ ಎಂಬುದು ನಾಗರಿಕರ ಪ್ರಶ್ನೆಯಾಗಿದೆ.
ಇತರೆ ಸುದ್ದಿಗಳು