ವರದಿಗಾರರು :
ನಜ್ರುಲ್ಲಾ ಬೇಗ್ ||
ಸ್ಥಳ :
ತುಮಕೂರು
ವರದಿ ದಿನಾಂಕ :
22-11-2025
“ನಾನೇನು ಸನ್ಯಾಸಿ ಅಲ್ಲ, ರಾಜಕಾರಣಿ” — ಸಚಿವ ಸ್ಥಾನ ಕುರಿತು ಸವದಿ ಸ್ಪಷ್ಟನೆ
ಬೆಳಗಾವಿಯಲ್ಲಿ ಮಾತನಾಡಿದ ಶಾಸಕ ಲಕ್ಷ್ಮಣ ಸವದಿ ಅವರು ಸಚಿವ ಸಂಪುಟ ವಿಸ್ತರಣೆ ಕುರಿತು ಈಗಾಗಲೇ ಯಾವುದೇ ಚರ್ಚೆ ನಡೆದಿಲ್ಲ ಎಂದು ಹೇಳಿದ್ದಾರೆ. ತಮ್ಮಿಗೂ ಸಚಿವ ಸ್ಥಾನಕ್ಕಾಗಿ ಅಪೇಕ್ಷೆಯಿರುವುದು ಸಹಜ, ಆದರೆ ಅದ ಬಗ್ಗೆ ತೀರ್ಮಾನವನ್ನು ಚಳಿಗಾಲ ಅಧಿವೇಶನ ಮುಗಿದ ನಂತರ ಹೈಕಮಾಂಡ್ ಮತ್ತು ಮುಖ್ಯಮಂತ್ರಿ ತೆಗೆದುಕೊಳ್ಳಲಿದ್ದಾರೆ ಎಂದರು.
ತಮ್ಮನ್ನು ಸಚಿವರಾಗಿ ಮಾಡುವುದನ್ನು ವರಿಷ್ಠರು ನಿರ್ಧರಿಸುವ ವಿಷಯವಾಗಿದ್ದು, “ನಾನೇನು ಸನ್ಯಾಸಿ ಅಲ್ಲ; ನಾನು ರಾಜಕಾರಣಿ. ರಾಜಕಾರಣದಲ್ಲಿ ಯಾರು ಸನ್ಯಾಸಿಗಳಾಗಿ ಇರಲು ಬಯಸುವುದಿಲ್ಲ” ಎಂದು ಅವರು ಸ್ಪಷ್ಟಪಡಿಸಿದರು. ಕ್ಷೇತ್ರದ ಅಭಿವೃದ್ಧಿಗಾಗಿ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದಾಗಿ ಸವದಿ ಹೇಳಿದ್ದಾರೆ. ಸಚಿವ ಸಂಪುಟ ವಿಸ್ತರಣೆಯಲ್ಲಿ ಯಾರಿಗೆ ಸ್ಥಾನ ಕೊಡಬೇಕು ಎಂಬುದು ಸಂಪೂರ್ಣವಾಗಿ ಮುಖ್ಯಮಂತ್ರಿ ಮತ್ತು ಹೈಕಮಾಂಡ್ ನಿರ್ಧಾರವೆಂದೂ ಅವರು ಹೇಳಿದರು.
