ವರದಿಗಾರರು :
ನಾಗಭೂಷಣ್ ಕೆ ||
ಸ್ಥಳ :
ತುಮಕೂರು
ವರದಿ ದಿನಾಂಕ :
02-12-2025
ತುಮಕೂರು ತಾಲೂಕಿನ ಗ್ರಾಮಸ್ಥರಿಗೆ ಕಾನೂನು ಜಾಗೃತಿ
ವಿದ್ಯೋದಯ ಕಾನೂನು ಕಾಲೇಜು ಎನ್‌ಎಸ್‌ಎಸ್ ಘಟಕದ ವಿಶೇಷ ವಾರ್ಷಿಕ ಶಿಬಿರದ ಅಂಗವಾಗಿ ದುರ್ಗ ಹಳ್ಳಿ ಗ್ರಾಮದಲ್ಲಿ ಕಾನೂನು ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರದ ಉಚಿತ ಕಾನೂನು ನೆರವು ಪಡೆಯುವ ಮಾನದಂಡಗಳನ್ನು ಸಾರ್ವಜನಿಕರಿಗೆ ವಿವರಿಸಲಾಯಿತು.
ಕಾರ್ಯಕ್ರಮದಲ್ಲಿ ಆಶಾ ಕೆ.ಎಸ್., ವಕೀಲರು ಮತ್ತು ಮಾಜಿ ಬಾಲ ನ್ಯಾಯ ಮಂಡಳಿ ಸದಸ್ಯರು ಹಾಗೂ ಮಾಜಿ ಸರ್ಕಾರಿ ವಿಶೇಷ ಅಭಿಯೋಜಕರು ಭಾಗವಹಿಸಿ, ಗ್ರಾಮಸ್ಥರು ಮತ್ತು ಶಿಬಿರಾರ್ಥಿಗಳಿಗೆ ವಿವಿಧ ನ್ಯಾಯಾಲಯದ ತೀರ್ಪುಗಳು ಹಾಗೂ ಅಪರಾಧಗಳ ಉದಾಹರಣೆಗಳ ಮೂಲಕ ಕಾನೂನು ಅರಿವು ನೀಡಿದರು.
ಕಾನೂನು ಕಾಲೇಜಿನ ಕಾನೂನು ಸೇವಾ ಕೋಶದ ಸಂಚಾಲಕ ರಶ್ಮಿ, ಸಹಾಯಕ ಪ್ರಾಧ್ಯಾಪಕರು ರಮೇಶ, ಮಂಜುನಾಥ, ಬಾಲಕೃಷ್ಣ, ಗ್ರಂಥಾಲಯ ಸಿಬ್ಬಂದಿ ಸುರೇಶಯ್ಯ, ದುರ್ಗ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಸ್ಥಳೀಯ ಮುಖಂಡರು, ಹಾಗೂ ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿಗಳು ಡಾ. ಕಿಶೋರ್ ವಿ., ಪುಷ್ಪ ಕೆ.ಎಸ್., ರೂಪ ಕೆ.ವಿ., ಡಾ. ಮುದ್ದು ರಾಜು ಹಾಜರಿದ್ದರು.
