ವರದಿಗಾರರು :
ಸಂತೋಷ್ ಶೆಟ್ಟಿ ||
ಸ್ಥಳ :
Bengaluru
ವರದಿ ದಿನಾಂಕ :
05-12-2025
ಜಿ.ಪಿ.ರಾಜರತ್ನಮ್ ಜನುಮದಿನ
ಕನ್ನಡನಾಡು ಕಂಡ ಅಪ್ರತಿಮ ಕ್ರಿಯಾಶೀಲ ಕವಿ
ಕನ್ನಡನಾಡು ಕಂಡ ಅಪ್ರತಿಮ ಕ್ರಿಯಾಶೀಲ ಕವಿ ,ಲೇಖಕ,ಗೀತರಚನೆಕಾರರಾದ ಜಿ.ಪಿ ರಾಜರತ್ನಮ್ ಅವರ ಜನುಮದಿನ. 1909ರಂದು ರಾಮನಗರದಲ್ಲಿ ಜನಿಸಿದರು .
ಮಕ್ಕಳ ಸಾಹಿತ್ಯ ರಚನೆಗೆ ಹೆಚ್ಚು ಪ್ರಸಿದ್ಧರಾಗಿದ್ದ ಜಿಪಿರಾಜರತ್ನಮ್ ಅವರನ್ನು ಭ್ರಮ ಎಂಬ ಕಾವ್ಯನಾಮದಿಂದ ಕರೆಯಲಾಗುತ್ತಿತ್ತು. ಮಕ್ಕಳ ಸಾಹಿತ್ಯದಲ್ಲಿ ತುತ್ತೂರಿ ರತ್ನನ ಪದಗಳು,ನಾಗನ ಪದಗಳು , ಕಡಲೆಪುರಿ, ಗುಲಗಂಜಿ ಮುಂತಾದ ಮನೋಸೃತಿ ಪಟಲದಲ್ಲಿ ಅಚ್ಚೊತ್ತುವಂತ ಸಾಹಿತ್ಯಗಳನ್ನ ರಚಿಸಿದ್ದಾರೆ.
ಧಾರ್ಮಿಕ ಸಾಹಿತ್ಯದಲ್ಲೂ ತಮ್ಮ ನೈಪೂಣ್ಯತೆ ತೋರಿದ ಜಿಪಿರಾಜರತ್ನಮ್ ಬೌದ್ಧ, ಜೈನ ಸಾಹಿತ್ಯಗಳಿಗೆ ಸಂಬಂಧಿಸಿದಂತೆ ಬುದ್ಧನ ಜಾತಕಗಳು,, ಭಗವಾನ್ ಮಹಾವೀರ ಕೃತಿಗಳನ್ನು ರಚಿಸಿದ್ದರು. ಜಿಪಿರಾಜರತ್ನಮ್ ಅವರ ಸಾಹಿತ್ಯ ಕೃಷಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ರಾಜದಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿಗಳು ಸಂದಿವೆ. 1978 ರಲ್ಲಿ ದೆಹಲಿಯಲ್ಲಿ ನಡೆದ 50 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕತೆ ವಹಿಸಿದ್ದ ಜಿಪಿರಾಜರತ್ನಮ್ 1979 ಮಾರ್ಚ್ 13 ರಂದು ವಿಧಿವಶರಾದರು.
