ವರದಿಗಾರರು :
ಸಂತೋಷ್ ಶೆಟ್ಟಿ ||
ಸ್ಥಳ :
Bengaluru
ವರದಿ ದಿನಾಂಕ :
02-12-2025
ಇಂದು ಡಿಸೆಂಬರ್ 2 ರಾಷ್ಟ್ರೀಯ ಪರಿಸರ ಮಾಲಿನ್ಯ ಜಾಗೃತಿ ದಿನ
ಮಾನವನ ಆಸೆ ಎಲ್ಲೇ ಮೀರಿ ದುರಾಸೆಯ ಅಂಚಿನಲ್ಲಿ ಬಂದು ನಿಂತಿವೆ. ದಾರ್ಶನಿಕರು ಹೇಳಿರುವಂತೆ ಮಾನವ ಭೂಮಿ ಅಗೆದು ಗೆಣಸು ತಗೆಯುವ ಕಾಲದಲ್ಲಿ ಪ್ರಮಾಣಿಕನಾಗಿದ್ದ. ಯಾವಾಗ ಭೂಮಿ ಅಗೆದು ಚಿನ್ನ ತಗೆಯಲು ಆರಂಭಿಸಿದನೋ ಅಲ್ಲಿಂದಲೇ ಶುರುವಾಯ್ತು ನೋಡಿ ದುರಾಸೆಯ ಯುಗ.
ಅಂದಿನಿಂದ ಮಾನವನ ಲೋಭಿತನ ಆರಂಭವಾಗಿ ಇಂದಿಗೂ ಅದು ರಾಜಾರೋಷವಾಗಿ ನಡೆಯುತ್ತಲೇ ಬಂದಿದೆ. ಅದರ ಜೊತೆ ಜೊತೆಗೆ ಇದು ಪರಿಸರ ನಿಸರ್ಗದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತಿದ್ದು, ಬದುಕಲು ಅನುವು ಮಾಡಿಕೊಟ್ಟ ಪರಿಸರವನ್ನೆ ಆಳಲು ಹೊರಟಿರುವುದು ವಿಪರ್ಯಾಸ ಮತ್ತು ದುರಂತ.
ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎಂಬ ಉಕ್ತಿ ಕೇಳಲೇನೋ ಚೆಂದ ಆದರೆ ನಾವೆಂದಾದರೂ ಯೋಚಿಸಿದ್ದೇವಾ? ನಾಳೆನ ಪ್ರಜೆಗಳಿಗೆ ಈ ಪರಿಸರ ನಿಸರ್ಗ ಎಷ್ಟು ಅನಿವಾರ್ಯವೆಂದು.?? ಇಲ್ಲ ಖಂಡಿತ ಇಲ್ಲ ಹಾಗೆ ಯೋಚಿದ್ದೆ ಆದರೆ ಇಂದು ನಾವು ಪರಿಸರ ಜಾಗೃತಿ ದಿನವನ್ನು ಆಚರಿಸಬೇಕಾದ ಅನಿವಾರ್ಯತೆ ಬರುತ್ತಿರಲಿಲ್ಲ. ಈ ಕುರಿತು ಸಾಕಷ್ಡು ಚಲನಚಿತ್ರಗಳು ಬಂದಿವೆ ಅದರಲ್ಲೂ ಮುಖ್ಯವಾಗಿ ನಟ ನಿರ್ದೇಶಕ ಪರಿಸರವಾದಿ ಸುರೇಶ್ ಹೆಬ್ಳಿಕರ್ ಪರಿಸರದ ಕುರಿತು ಸಾಕಷ್ಡು ಜಾಗೃತಿ ಅಭಿಯಾನ ನಡೆಸಿದ್ದಾರೆ. 1998 ರಲ್ಲಿ ಇಕೋ-ವಾಚ್ ಎಂಬ ಎನ್ ಜಿ ಓ ಸಂಸ್ಥೆಯನ್ನ ಸ್ಥಾಪಿಸಿ ಪರಿಸರ ಮತ್ತು ನಿಸರ್ಗ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುತ್ತಲೇ ಬರುತ್ತಿದ್ದಾರೆ. ಆದರೆ ಅಭಿವೃದ್ಧಿ ಹೆಸರಿನಲ್ಲಿ ಪರಿಸರವನ್ನೆ ದ್ವಂಸ ಮಾಡುವ ,ಮಾಡುತ್ತಿರುವವರಿಗೇನು ಕಡಿಮೆ ಇಲ್ಲ . ಇಂದು ಜ್ವಲಂತ ಸಾಕ್ಷಿಯಾಗಿ ಕಾಣುತ್ತಿರುವ ಪ್ರಕೃತಿ ವಿಕೋಪ, ಅಕಾಲಿಕ ಮಳೆ ಹವಮಾನ ವೈಪರಿತ್ಯಕ್ಜೆ ಮೂಲ ಕಾರಣವೇ ಪರಿಸರ ನಾಶ. ಪ್ರಕೃತಿ ವಿಲೋಪಕ್ಕೆ ಶಪಿಸುವ ಮನುಷ್ಯನಿಗೆ ಸ್ವತಃ ತಾನು ಮಾಡಿರುವ ಪರಿಸರ ದ್ರೋಹದ ಕುರಿತು ಯಕಃಶಿತ್ ಪಶ್ಚಾತಪವಿಲ್ಲ.
ಹೇಗೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರೋ ಅದೇ ರೀತಿಯಲ್ಲಿ ಈಗ ಪರಿಸರ ಉಳಿವಿಗಾಗಿ ಹೋರಾಡುವ ಕಾಲ ಸನಿಹಿತವಾಗಿದೆ. ಜಾಗತಿಕ ತಾಪಮಾನದ ಕುರಿತು ವಿಶ್ವದೆಲ್ಲಡೆ ಪರಿಸರ ಜಾಗೃತಿ ಅಭಿಯಾನ ಆರಂಭವಾಗಿದೆ. ಮಾನವ ನಿರ್ಮಿತ ಕೃತಕ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಪರಿಸರದ ಕುರಿತು ಕಳವಳ ವ್ಯಕ್ತಪಡಿಸುವ ದಿಗ್ಗಜರು ಆಚೆ ಪರಿಸರಗಳ ಮೇಲೆ ಕ್ರೌರ್ಯ ಎಸೆಗುತ್ತಲೇ ಬಂದಿದ್ದಾರೆ. ಅಭಿವೃದ್ಧಿ ಹೆಸರಿನಲ್ಲಿ ಅಗತ್ಯಕ್ಕಿಂತ ಹೆಚ್ಚು ಪರಿಸರ ಹಾನಿಗೊಳಿಸುವ ಕಾರ್ಯ ಮಾತ್ರ ಸುಸೂತ್ರವಾಗಿ ಸಾಗುತ್ತಲೇ ಇವೆ. ಕೇವಲ ಔಪಚಾರಿಕತೆಯಿಂದ ಕೂಡಿರದ ಪರಿಸರ ಮಾಲಿನ್ಯ ಜಾಗೃತಿ ಪ್ರತಿದಿನವೂ ಆಚರಿಸುವಂತಾಗಲಿ. ಕೊನೆಯ ಪಕ್ಷ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಒದಗಿಸುವ ಪುಣ್ಯದ ಕೆಲಸ ನಮ್ಮಿಂದಲೇ ಆಗಬೇಕಿದೆ.
