ವರದಿಗಾರರು :
ಗಜೇಂದ್ರ ದೇವನಹಳ್ಳಿ ||
ಸ್ಥಳ :
Bengaluru
ವರದಿ ದಿನಾಂಕ :
05-12-2025
ಯಲಿಯೂರು ಹಾಲು ಉತ್ಪಾದಕರ ಸಂಘದಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಯಲಿಯೂರು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಹಿಂದೆ ಅಧ್ಯಕ್ಷ ರಾಗಿದ್ದ ರಘುವೀರ್ ರವರು ತನ್ನ ಅಧ್ಯಕ್ಷ ಸ್ಥಾನಕ್ಕೆ ಹಾಗು ಉಪಾಧ್ಯಕ್ಷರಾಗಿದ್ದ ಅನುಪಮ ತಮ್ಮ ಸ್ಥಾನಗಳಿಗೆ ರಾಜೀನಾಮೆಗಳನ್ನು ಸಲ್ಲಿಸಿರುವುದ ರಿಂದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳು ತೆರವಾಗಿರುವ ಕಾರಣ ಆ ಸ್ಥಾನಗಳಿಗೆ ಚುನಾವಣೆ ಇಂದು ನಡೆಯಿತು.
ಚುನಾವಣಾಧಿಕಾರಿ ಭಾಸ್ಕರ್ ರವರು ಮಾತನಾಡಿ ಇಂದು ನಡೆದ ಅಧ್ಯಕ್ಷರ ಸ್ಥಾನಕ್ಕೆ ಡಿ.ಎನ್. ಎಫ್.ಕುರಿ ಮತ್ತು ಮೇಕೆ ರೈತ ಉತ್ಪಾದಕರ ಕಂಪನಿಯ ನಿರ್ದೇಶಕರಾದ ಪ್ರಕಾಶ್ ರವರು ಹಾಗು ಉಪಾಧ್ಯಕ್ಷ ಸ್ಥಾನಕ್ಕೆ ಲಕ್ಷ್ಮಮ್ಮ ರವರುಗಳು ತಮ್ಮ ಸ್ಥಾನಗಳಿಗೆ ನಾಮಪತ್ರಗಳನ್ನು ಸಲ್ಲಿಸಿದ್ದರು. ಇವರನ್ನು ಹೊರತುಪಡಿಸಿದರೆ ಬೇರೆ ಯಾರೋಬ್ಬ ಸದಸ್ಯರು ನಾಮಪತ್ರಗಳು ಸಲ್ಲಿಸದೆ ಇದ್ದ ಕಾರಣ ಅಧ್ಯಕ್ಷರ ಸ್ಥಾನಕ್ಕೆ ಪ್ರಕಾಶ್ ರವರು ಹಾಗು ಉಪಾಧ್ಯಕ್ಷರ ಸ್ಥಾನಕ್ಕೆ ಲಕ್ಷ್ಮಮ್ಮ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎಂದು ಚುನಾವಣಾಧಿಕಾರಿ ಭಾಸ್ಕರ್ ರವರು ಚುನಾವಣೆ ಪ್ರಕ್ರಿಯೆ ನಡೆಸಿದರು.
ಈ ದಿನದ ಚುನಾವಣೆಯಲ್ಲಿ ಪ್ರಕ್ರಿಯೆಯಲ್ಲಿ ಮಾಜಿ ಅಧ್ಯಕ್ಷರುಹಾಗು ಹಾಲಿ ಸದಸ್ಯ ರಘುವೀರ್ ಮಾಜಿ ಉಪಾಧ್ಯಕ್ಷರು ಹಾಗು ಹಾಲಿ ಸದಸ್ಯರಾದ ಅನುಪಮ. ನಿರ್ದೇಶಕರುಗಳಾದ ಮುನಿರಾಜು. ರಾಮಾಂಜಿನಯ್ಯ ಬಸವರಾಜ್ ಸಂಪಂಗಿ ರಾಮಯ್ಯ ಆನಂದ್ ಸವಿತಾ ಮುನಿರಾಜು ಭೈರಪ್ಪ ನಾರಾಯಣಸ್ವಾಮಿ ಮುಖ್ಯ ಕಾರ್ಯನಿರ್ವಾಹಕರಾದಕೇಶವ .ರವರುಗಳು ಹಾಜರಿದ್ದು ಅಧ್ಯಕ್ಷ, ಉಪಾಧ್ಯಕ್ಷ ಅವಿರೋಧ ಆಯ್ಕೆಗೆ ಸಹಕರಿಸಿದರು.
