ವರದಿಗಾರರು :
ಸಂತೋಷ್ ಶೆಟ್ಟಿ ||
ಸ್ಥಳ :
Bengaluru
ವರದಿ ದಿನಾಂಕ :
05-12-2025
ರಷ್ಯಾ ಅಧ್ಯಕ್ಷ ಮತ್ತು ಭದ್ರತೆ
ವಿಶ್ವದಲ್ಲೇ ಅತ್ಯಂತ ಬಲಿಷ್ಠ ನಾಯಕರಾದ ರಷ್ಯಾ ಅಧ್ಯಕ್ಷ ವ್ಲಾದಿಮರ್ ಪುಟಿನ್ ಭದ್ರತೆಯ ಕುರಿತು ಸಾಕಷ್ಟು ಅಧ್ಯಯನ ವಿಮರ್ಶೆಗಳು ನಡೆದಿವೆ in fact ನಡೆಯತ್ತಲೂ ಇವೆ.
ರಷ್ಯಾ ಅಧ್ಯಕ್ಷರು ಭೇಟಿ ನೀಡುವ ದೇಶದಲ್ಲಿ ತಿಂಗಳಿಗಿಂತ ಮೊದಲೇ ಅವರ ರಹಸ್ಯ ಕಾರ್ಯಾಚರಣೆಯ ಏಜೆಂಟ್ಗಳು ತಮ್ಮ ಗುಪ್ತಬಕಾರ್ಯಾಚರಣೆ ನಡೆಸಿ ಮಾಹಿತಿ ಕಲೆ ಹಾಕುತ್ತಾರೆ.
ಭದ್ರತೆಯ ಹಂತ:
ರಷ್ಯ ಅಧ್ಯಕ್ಷ ಪುಟಿನ್ ಅವರಿಗೆ ನಾಲ್ಕು ಹಂತಗಳಲ್ಲಿ ಭದ್ರತೆಯನ್ನ ನೀಡಲಾಗುತ್ತದೆ. ಮೊದಲನೆಯ ಹಂತ:- ಪುಟಿನ್ ಅವರ ಖಾಸಗಿ ಬಾಡಿಗಾರ್ಡ್ ಇವರು ಪುಟಿನ್ ಸುತ್ತಲೂ ಒಂದು ಬ್ರೀಫ್ ಕೇಸ್ ಹಿಡಿದು ಬರುತ್ತಿರುತ್ತಾರೆ. ಅವರು ಗುರಜಾ ಹೆಸರಿನ ಅತ್ಯಾಧುನಿಕ ಪಿಸ್ತೋಲ್ ಹೊಂದಿರುತ್ತಾರೆ. ಇದು ನಿಮಿಷಕ್ಕೆ ನಲವತ್ಥು ಗುಂಡುಗಳನ್ನು ಹಾರಿಸಬಲ್ಲದು.
ಎರಡನೆಯ ಹಂತ ಸಿಕ್ರೆಟ್ ಏಜೆಂಟ್ ಪುಟಿನ್ ಭಾಗವಹಿಸುವ ಕಾರ್ಯಕ್ರಮದಲ್ಲಿ ಇವರು ಸಹಜವಾಗಿ ನಾಗರಿಕರಂತೆ ಓಡಾಡಿಕೊಂಡಿರುತ್ತಾರೆ. ಸುತ್ತಮುತ್ತಲಿನ ಜನರ ಮೇಲೆ ನಿಗಾ ಇಡುವುದೇ ಇವರ ಕೆಲಸ
ಮೂರನೇ ಹಂತ ಪಬ್ಲಿಕ್ ಏಜೆಂಟ್ಸ್ ಸಾರ್ವನಿಕರ ಜೊತೆ ಒಂದಾಗಿ ಮಾಹಿತಿಗಳನ್ನು ಕಲೆ ಹಾಕುತ್ತಾರೆ. ಯಾವುದೇ ಸಂಶಯಾಸ್ಪದ ವಿಷಯ ತಿಳಿದ ತಕ್ಷಣ ಮುಂದಿನ ಕ್ರಮಕ್ಕೆ ಸಜ್ಜಾಗುತ್ತಾರೆ.
ಕೊನೆಯ ಮತ್ತು ನಾಲ್ಕನೆ ಹಂತ ಸ್ಪೇಷಲ್ ಗಾರ್ಡ್. ಅಕ್ಕಪಕ್ಜಗಳಲ್ಲಿರುವ ಕಟ್ಟಡ ಮಳಿಗೆಗಳ ಮೇಲೆ ನಿಂತು ಶಂಕಿತರ ಮೇಲೆ ಕಣ್ಣಿಟ್ಟಿರುತ್ತಾರೆ.
ಪುಟಿನ್ ಮಲ ಮೂತ್ರವೂ ರಷ್ಯಾಗೆ. ಏನಿದು ?? ರಷ್ಯಾ ಅಧ್ಯಕ್ಷ ಪುಟಿನ್ ಮಲ ಮೂತ್ರ ಕೂಡಾ ಅವರು ಭೇಟಿ ನೀಡುವ ದೇಶದಲ್ಲಿ ಬಿಡುವುದಿಲ್ಲ. ಅದಕ್ಕಾಗಿಯೇ ಒಂದು ವಿಷೇಶ ಬ್ರೀಫ್ ಕೇಸ್ ವ್ಯವಸ್ಥೆ ಇದೆ. ಅದರ ಮೂಲಕ ಪುಟಿನ್ ವಿಸರ್ಜಿಸಿದ ಮಲ ಮೂತ್ರ ತಗೆದುಕೊಂಡು ರಷ್ಯಾಗೆ ಮರಳಿಸಲಾಗುತ್ತದೆ. ಪುಟಿನ್ ದೇಹದ ಜೈವಿಕ ಅಂಶ ಅವರು ತಗೆದುಕೊಳ್ಳುವ ಔಷಧಿಗಳು ಸಹ ಅಷ್ಟೆ ಗುಪ್ತವಾಗಿ ಇಡುವ ಉದ್ದೇಶದಿಂದ ಹಾಗೂ ಅದರ ಮಾಹಿತಿ ಇತರೇ ರಾಷ್ಟ್ರಗಳಿಗೆ ತಿಳಿಯಬಾರದೆಂದು ಈ ರೀತಿಯ ವ್ಯವಸ್ಥೆ ಮಾಡಲಾಗುತ್ತದೆ.
ರಷ್ಯಾ ಅಧ್ಯಕ್ಷ ಪುಟಿನ್ ಅಷ್ಟಾಗಿ ಇಂಗ್ಲಿಷ್ ಮಾತನಾಡೊದಿಲ್ಲ. ಜರ್ಮನ್ ಭಾಷೆಯಲ್ಲಿ ಪ್ರಾವಿಣ್ಯತೆ ಹೊಂದಿದ್ದಾರೆ.
