ವರದಿಗಾರರು :
ನಾ.ಅಶ್ವಥ್ ಕುಮಾರ್ ||
ಸ್ಥಳ :
Chamrajnagar
ವರದಿ ದಿನಾಂಕ :
06-12-2025
ದುರ್ಗಮ ರಸ್ತೆ ಇದು ಹೇಗೆ ಓಡಾಡೋದು
ಈದು ಕಾಡಿನೊಳಗಿರುವ ರಸ್ತೆ, ಇದೇ ರಸ್ತೆ ಮಾರ್ಗವಾಗಿ ನಿತ್ಯವೂ ಶಾಲೆಯಲ್ಲಿ ವ್ಯಾಸಾಂಗ ಮಾಡಲು ನಡೆದುಕೊಂಡೇ ಓಡಾಡಬೇಕು. ನಿಮಗೇನಪ್ಪ ತಿಂಗಳಾದರೆ ಸಂಬಳ ಬರುತ್ತೆ, ನಮಗೇನು ಬರುತ್ತೆ, ನಾವು ಓದಿ ವಿದ್ಯಾವಂತರಾಗಬೇಕು ನಿಮಗೆ ಕಣ್ಣು ಕಾಣಲ್ವೆ ಸಿದ್ದರಾಮಯ್ಯರವರೇ ಪಚ್ಚೆದೊಡ್ಡಿಯ ರಸ್ತೆ ಎಂದು ಹೆಣ್ಣು ಮಕ್ಕಳು ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಟೀಕಿಸಿದ ರೀತಿ
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಪಚ್ಚೆದೊಡ್ಡಿ ಯಿಂದ ಶಾಲೆಗೆ ತೆರಳುವ ಮಾರ್ಗವು ದುರ್ಗಮವಾಗಿದ್ದು, ಕಲ್ಲು, ಮಣ್ಣಿನಿಂದ ಕೂಡಿದೆ. ಇಲ್ಲಿಗೆ ವಾಹನಗಳು ಸರಿಯಾಗಿ ಸಂಚಾರ ಮಾಡುವುದಿಲ್ಲ. ನಿಗಧಿತ ಸಮಯಕ್ಕೆ ಶಾಲೆಗೆ ಹೋಗದಿದ್ದರೆ ಮೇಸ್ಟ್ರು ಬೈಯ್ಯುವರು , ಸಮಯಕ್ಕೆ ಸರಿಯಾಗಿ ಶಾಲೆಗೆ ತೆರಳಲು ವಾಹನ ಸೌಕರ್ಯವಿಲ್ಲ, ಜೊತೆಗೆ ನಡೆದುಕೊಂಡೇ ಹೋಗಬೇಕು, ಹೆಣ್ಣು ಮಕ್ಕಳ ಸಂಕಷ್ಟ ಬಗೆಹರಿಸಿ ಎಂದು ವಿದ್ಯಾರ್ಥಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಒತ್ತಾಯಿಸಿದ ಪರಿಇದು.
ಶಿಕ್ಷಣ ಪಡೆಯಲು ಹೆಗಲ ಮೇಲೆ ಪುಸ್ತಕವಿರುವ ಬ್ಯಾಗ್ ನೇತು ಹಾಕಿಕೊಂಡು ಸುಮಾರು 7 ಕಿಲೋ ಮೀಟರ್ ನಡೆದುಕೊಂಡೇ ತಮ್ಮ ಮೊಬೈಲ್ನಲ್ಲಿ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಮುಖ್ಯಮಂತ್ರಿಗಳು ಈ ಬಗ್ಗೆ ಗಮನಹರಿಸಬೇಕಾಗಿದೆ ಎಂದು ಮನವಿ ಮಾಡಿಕೊಂಡಿದ್ದಾರೆ ವಿದ್ಯಾರ್ಥಿಗಳು. ಪಚ್ಚೆದೊಡ್ಡಿಯಿಂದ ಶಾಲೆ ತನಕ ನಡೆದುಕೊಂಡೇ ಹೋಗುವ ವಿದ್ಯಾರ್ಥಿಗಳು ಕಾಡು ಪ್ರಾಣಿಗಳ ದಾಳಿಯ ಜೀವ ಭಯದಲ್ಲೇ ಸಾಗುವುದು ಸಹಜವಾಗಿದೆ. ಇದರಿಂದ ಬೇಸತ್ತ ವಿದ್ಯಾರ್ಥಿಗಳು ಶಾಲೆಗೆ ನಡೆದುಕೊಂಡು ಹೇಗುವಾಗ ಬೇಕೇ ಬೇಕು ನ್ಯಾಯ ಬೇಕು, ರಸ್ತೆ ಬೇಕು ಎಂದು ಘೋಷಣೆ ಕೂಗುತ್ತಾ ಸಾಗುವ ದೃಶ್ಯಗಳು ಮನಕಲಕುವಂತ್ತಿತ್ತು
