ವರದಿಗಾರರು :
ಕೆಜಿ ಸುರೇಶ ||
ಸ್ಥಳ :
hasan
ವರದಿ ದಿನಾಂಕ :
05-12-2025
ಕಬಡ್ಡಿ, ಖೋಖೋ, ವಾಲಿಬಾಲ್: ಹಾಸನ ತಂಡ ಪ್ರಥಮ ೨೮ನೇ ರಾಜ್ಯ ಮಟ್ಟದ ಆದಿಚುಂಚನಗಿರಿ ಕ್ರೀಡಾಕೂಟ ಯಶಸ್ವಿ: ಚುಂಚಶ್ರೀ�
ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ೨೮ನೇ ರಾಜ್ಯ ಮಟ್ಟದ ಆದಿಚುಂಚನಗಿರಿ ಕ್ರೀಡಾಕೂಟ ಶುಕ್ರವಾರ ಯಶಸ್ವಿಯಾಗಿ ಮುಕ್ತಾಯಗೊಂಡಿತು.
೧೯ ವರ್ಷದ ಬಾಲಕರ ವಿಭಾಗದ ಕಬಡ್ಡಿಯಲ್ಲಿ ಹಾಸನ ಪ್ರಥಮ, ರಾಮನಗರ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ವಾಲಿಬಾಲ್ ನಲ್ಲಿ ಹಾಸನ (ಪ್ರ), ಖೋ-ಖೋ ಹಾಸನ (ಪ್ರ), ಭದ್ರವಾತಿ (ದ್ವಿ), ಹ್ಯಾಂಡ್ ಬಾಲ್ ನಲ್ಲಿ ತುಮಕೂರು (ಪ್ರ), ರಾಮನಗರ (ದ್ವಿ), ಶಟಲ್ ಬ್ಯಾಡ್ಮಿಟನ್ ಶಿವಮೊಗ್ಗ (ಪ್ರ), ಮಂಡ್ಯ (ದ್ವಿ), ಡಾರ್ಜ್‌ಬಾಲ್‌ನಲ್ಲಿ ಆದಿಚುಂಚನಗಿರಿ (ಪ್ರ), ತುಮಕೂರು ದ್ವಿತೀಯ ಸ್ಥಾನ ಪಡೆದುಕೊಂಡಿದೆ.
೧೯ ವರ್ಷದ ಬಾಲಕಿಯ ವಿಭಾಗದ ವಾಲಿಬಾಲ್ ನಲ್ಲಿ ಹಾಸನ ಪ್ರಥಮ, ರಾಮನಗರ ದ್ವಿತೀಯ, ಖೋ-ಖೋ ಹಾಸನ ಪ್ರಥಮ, ಡಾರ್ಜ್ ಬಾಲ್ ಆದಿಚುಂಚನಗಿರಿ ಪ್ರಥಮ, ಚಿಕ್ಕಬಳ್ಳಾಪುರ ದ್ವಿತೀಯ, ಶಟಲ್ ಬ್ಯಾಡ್ಮಿಟನ್ ಶಿವಮೊಗ್ಗ ಪ್ರಥಮ, ಬಿ.ಜಿ.ನಗರ ದ್ವಿತೀಯ, ಕಬಡ್ಡಿ ಮಂಡ್ಯ (ಪ್ರ), ಶಿವಮೊಗ್ಗ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ೧೪ ವರ್ಷದ ಬಾಲಕರ ವಿಭಾಗದ ಕಬಡ್ಡಿಯಲ್ಲಿ ಮೈಸೂರು ಪ್ರಥಮ, ತುಮಕೂರು ದ್ವಿತೀಯ, ೧೪ ವರ್ಷದ ಬಾಲಕಿಯರ ವಿಭಾಗದ ಕಬಡ್ಡಿಯಲ್ಲಿ ಹಾಸನ ಪ್ರಥಮ, ಮೈಸೂರು ದ್ವಿತೀಯ ಸ್ಥಾನ ಪಡೆದುಕೊಂಡಿದ್ದು, ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರು ವಿಜೇತ ಕ್ರೀಡಾಪಟುಗಳಿಗೆ ಬಹುಮಾನ ವಿತರಣೆ ಮಾಡಿದರು. ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಸೇರಿ ವಿವಿಧ ಶಾಖಾ ಮಠದ ಸ್ವಾಮೀಜಿಗಳು ಹಾಜರಿದ್ದರು.
