ವರದಿಗಾರರು :
ತೌಕೀರ್ ಖತೀಬ್ ||
ಸ್ಥಳ :
ಬೆಳಗಾವಿ
ವರದಿ ದಿನಾಂಕ :
08-11-2025
ಕಬ್ಬು ಬೆಲೆಗೆ ₹3,300 ಘೋಷಣೆ – ಹೋರಾಟಕ್ಕೆ ಸರ್ಕಾರ ತಲೆಬಾಗಿತು:
ಕಬ್ಬು ಬೆಲೆಗೆ ₹3,300 ಘೋಷಣೆ – ರೈತರ ಹೋರಾಟಕ್ಕೆ ಸರ್ಕಾರ ತಲೆಬಾಗಿತು: ಶಶಿಕಾಂತ ಪಡಸಲಗಿ ಗುರೂಜಿ
ಬೆಳಗಾವಿ ಜಿಲ್ಲೆಯ ರೈತ ಮುಖಂಡರು ಹಾಗೂ ಕಬ್ಬು ಹೋರಾಟದ ಪ್ರಮುಖ ಕಾರ್ಯನಿಬೂತರಾದ ಶಶಿಕಾಂತ ಪಡಸಲಗಿ ಗುರೂಜಿ ಅವರು ಕಬ್ಬು ಬೆಲೆಗೆ ₹3,300 ದರ ಘೋಷಣೆಯ ನಂತರ ಪ್ರತಿಕ್ರಿಯೆ ವ್ಯಕ್ತಪಡಿಸಿದರು.
“ಸರ್ಕಾರ ನಾವು ಎಲ್ಲಿ ಇರುತ್ತೇವೋ ಅಲ್ಲಿ ಬಂದು ಮಾತುಕತೆ ನಡೆಸಬೇಕು. ನಾವು ಸರ್ಕಾರದ ಕಡೆ ಹೋಗುವುದಿಲ್ಲ. ಆದರೆ ನಮ್ಮ ಹೋರಾಟದ ಶಕ್ತಿ ಸರ್ಕಾರಕ್ಕೆ ತೋರಿತು ಮತ್ತು ಇಂದು ನಮಗೆ ನ್ಯಾಯ ಸಿಕ್ಕಿದೆ,” ಎಂದು ಅವರು ಹೇಳಿದರು.
ಅವರು ಮುಂದುವರೆದು, “ಬರುವ ಅಧಿವೇಶನದಲ್ಲಿ ನಾವು ರೈತ ಮುಖಂಡರು ಸೇರಿ ಬೆಳಗಾವಿಯಲ್ಲಿ ಪ್ರೆಸ್ ಮೀಟ್ ಮೂಲಕ ಮುಂದಿನ ಹೋರಾಟದ ದಿಕ್ಕು ತಿಳಿಸುತ್ತೇವೆ. ಇಂದಿನ ಘೋಷಣೆಯೊಂದಿಗೆ ಈ ಹೋರಾಟವನ್ನು ಇಲ್ಲಿಗೆ ಮುಕ್ತಾಯಗೊಳಿಸುತ್ತೇವೆ,” ಎಂದರು.
ಕಳೆದ ಕೆಲವು ವಾರಗಳಿಂದ ಬೆಳಗಾವಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರೈತರು ಕಬ್ಬು ಬೆಲೆ ಏರಿಕೆಗೆ ಒತ್ತಾಯಿಸಿ ತೀವ್ರ ಹೋರಾಟ ನಡೆಸುತ್ತಿದ್ದರು. ಸರ್ಕಾರದ ಈ ಘೋಷಣೆ ಬಳಿಕ ರೈತರ ಸಂತೋಷ ವ್ಯಕ್ತವಾಗಿದೆ.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
