ವರದಿಗಾರರು :
ಇಮಾಮಸಾಬ ಹಣಬರಕಡಬಿ ||
ಸ್ಥಳ :
ಸವದತ್ತಿ
ವರದಿ ದಿನಾಂಕ :
05-11-2025
ಯರಗಟ್ಟಿ ರೈತ ಹೋರಾಟ: ಕಬ್ಬು ಬೆಲೆ ನಿಗದಿ ಪಡಿಸುವ ಕುರಿತು.ಮನವಿ ಸ್ವೀಕಾರ
ಯರಗಟ್ಟಿ ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಸರ್ಕಲ್ ನಲ್ಲಿ.ರೈತಪರ ಹೋರಾಟಗಾರರ.ವೇದಿಕೆಯ ಲ್ಲಿ. ದಿನಾಂಕ 03-11-2025ರಂದು ಯರಗಟ್ಟಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕಬ್ಬು ಬೆಳೆಗಾರರ ನೇತೃತ್ವದಲ್ಲಿ ನಡೆದ 'ಕಬ್ಬು ಬೆಲೆ ಘೋಷಣೆ' ಕುರಿತ ರೈತರ ಹೋರಾಟದಲ್ಲಿ. ಸ್ಥಳೀಯ ಶಾಸಕರಾದ ವಿಶ್ವಾಸ್ ಅಣ್ಣ ವೈದ್ಯರವರು. ಭಾಗವಹಿಸಿ. ಅವರ ಮನವಿ ಪತ್ರವನ್ನು ಸ್ವೀಕರಿಸಲಾಯಿತು. ಈ ಹೋರಾಟದಲ್ಲಿ ರೈತರು ಪ್ರತಿ ಟನ್ ಕಬ್ಬಿಗೆ ₹3500 ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿದರು. ಅವರ ಮನವಿ ಸ್ವೀಕರಿಸಿ, ಆದಷ್ಟು ಬೇಗ ಸರ್ಕಾರದ ಮಟ್ಟದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ರೈತರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆಯನ್ನು. ನೀಡಿದರು. ಈ ಸಂದರ್ಭದಲ್ಲಿ. ಕರ್ನಾಟಕ ರಾಜ್ಯ ರೈತ ಸಂಘ. ರೈತ ಸಂಘದ ರಾಜ್ಯ ಮುಖಂಡರು ಜಿಲ್ಲಾ ಮುಖಂಡರು. ರೈತಪರ ಹೋರಾಟಗಾರರು. ವಿವಿಧ ಮುಖಂಡರು .ಮುಂತಾದವರು ಉಪಸ್ಥಿತರಿದ್ದರು. ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಿಮ್ಮ ವಾಟ್ಸಾಪ್ ಗ್ರೂಪ್‌ಗೆ 7892441717 ಸಂಖ್ಯೆಯನ್ನು ಸೇರಿಸಿ
