ವರದಿಗಾರರು :
ಮೀನಾಕ್ಷಿ ರಮೇಶ್ ರಾಠೋಡ್ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
14-04-2025
ಸೆಂಚುರಿ ಬಾರಿಸಿದ್ದಕ್ಕೆ ಪಾಕ್ ಸೂಪರ್ ಲೀಗಲ್ಲಿ ಸಿಕ್ಕಿದ್ದು ಹೇರ್ ಡ್ರೈಯರ್!
ಇಸ್ಲಾಮಾಬಾದ್: ಪಂದ್ಯಶ್ರೇಷ್ಠ ಪ್ರಶಸ್ತಿಗೆ ಹೇರ್ ಡ್ರೈಯರ್ ನೀಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಪಾಕಿಸ್ತಾನ ಸೂಪರ್ ಲೀಗ್ (PSL) ಈಗ ಟ್ರೋಲ್ ಆಗುತ್ತಿದೆ.
ಏಪ್ರಿಲ್ 11 ರಿಂದ ಪಿಎಸ್‌ಎಲ್ ಆರಂಭವಾಗಿದ್ದು ಮುಲ್ತಾನ್ ಸುಲ್ತಾನ್ ವಿರುದ್ಧ ಕರಾಚಿ ಕಿಂಗ್ಸ್ ರೋಚಕ ಜಯ ಸಾಧಿಸಿತ್ತು.
ಮೊದಲು ಬ್ಯಾಟ್ ಮಾಡಿದ್ದ ಮುಲ್ತಾನ್ ಕಿಂಗ್ಸ್ 3 ವಿಕೆಟ್ ನಷ್ಟಕ್ಕೆ 234 ರನ್ ಹೊಡೆಯಿತು. ಸವಾಲಿನ ಮೊತ್ತ ಇದ್ದರೂ ಕರಾಚಿ ಕಿಂಗ್ಸ್ 19.2 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 236 ರನ್ ಹೊಡೆದು ಜಯಗಳಿಸಿತು.
ಈ ಪಂದ್ಯದಲ್ಲಿ ಜೇಮ್ಸ್ ವಿನ್ಸ್ ಅವರು 43 ಎಸೆತಗಳಲ್ಲಿ 101 ರನ್(14 ಬೌಂಡರಿ, 4 ಸಿಕ್ಸ್) ಹೊಡೆದು ಜಯಗಳಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು.
ಈ ವಿಶೇಷ ಸಾಧನೆಗೆ ಅರ್ಹವಾಗಿಯೇ ವಿನ್ಸ್ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತು. ಪಂದ್ಯಶ್ರೇಷ್ಠ ಪ್ರಶಸ್ತಿಯಾಗಿ ವಿನ್ಸ್ ಅವರಿಗೆ ಹೇರ್ ಡ್ರೈಯರ್ ನೀಡಲಾಯಿತು. ಹೇರ್ ಡ್ರೈಯರ್ ನೀಡಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದೆ.
