ವರದಿಗಾರರು :
ನಾ.ಅಶ್ವಥ್ ಕುಮಾರ್ ||
ಸ್ಥಳ :
ಗುಂಡ್ಲುಪೇಟೆ
ವರದಿ ದಿನಾಂಕ :
09-11-2025
ಕೂಂಬಿಂಗ್ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಚಿರತೆ ದಾಳಿ*
ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ್ ಅರಣ್ಯ ವಲಯ ವ್ಯಾಪ್ತಿಯ ಯಡವನಹಳ್ಳಿ ಮತ್ತು ಹೊರೆಯಾಲ ವ್ಯಾಪ್ತಿಯಲ್ಲಿ ಹುಲಿ ಪತ್ತೆಗಾಗಿ ಕೂಂಬಿಂಗ್ ನಡೆಸುತ್ತಿದ್ದ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆರಗಿದ ಚಿರತೆ ತೀವ್ರವಾಗಿ ಗಾಯಗೊಳಿಸಿರುವ ಘಟನೆ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಹೊರೆಯಾಲ , ಯಡವನಹಳ್ಳಿ ಹೊರವಲಯದಲ್ಲಿ ಕೂಂಬಿಂಗ್ ಕಾರ್ಯಚರಣೆ ವೇಳೆ ಪ್ರತ್ಯಕ್ಷವಾದ ಚಿರತೆ ಅಲ್ಲಿಯೇ ಮೇಯುತ್ತಿದ್ದ ಮೇಕೆಯನ್ನ ಬಲಿ ಪಡೆಯುವುದಲ್ಲದೆ ಅರಣ್ಯ ಇಲಾಖೆಯ ಆನೆ ಕಾವಲು ಪಡೆ ಸಿಬ್ಬಂದಿ ಬಂಗಾರು ಎಂಬವರ ಮೇಲೆರಗಿ ತಲೆ ಮತ್ತು ಕೈಗೆ ಪರಚಿದ್ದು ತೀವ್ರತರವಾದ ಪೆಟ್ಟಾಗಿದೆ, ಚಿರತೆ ದಾಳಿಗೊಳಗಾದ ಸಿಬ್ಬಂದಿಯನ್ನ ಬೇಗೂರು ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
