ವರದಿಗಾರರು :
ಕಿಶೋರ್ ಎ.ಸಿ., ||
ಸ್ಥಳ :
ಕೃಷ್ಣರಾಜಪೇಟೆ
ವರದಿ ದಿನಾಂಕ :
30-10-2025
ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರಿಗೆ ತೂಕದಲ್ಲಿ ಮೋಸ
ಕೃಷ್ಣರಾಜಪೇಟೆ: ಬುಧವಾರ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರಿಗೆ ಅಡಿಕೆಯ ತೂಕದಲ್ಲಿ ಮೋಸ ನಡೆದಿದೆ. ಕೈಗೋನಹಳ್ಳಿ ಗ್ರಾಮದ ರೈತ ಹರೀಶ್ ಅವರಿಗೆ ಒಂದು ಮೂಟೆ ಅಡಿಕೆಗೆ 11 ಕೆ.ಜಿ. ತೂಕದ ವ್ಯತ್ಯಾಸವಾಗಿರುವುದು ಗೊತ್ತಾದ ನಂತರ ತೂಕದ ಯಂತ್ರವನ್ನು ಪರಿಶೀಲಿಸಿದಾಗ ಮೋಸದ ವಿಷಯ ಬೆಳಕಿಗೆ ಬಂದಿದೆ.
ಈ ಬಗ್ಗೆ ಮಾಹಿತಿ ತಿಳಿದ ಕೂಡಲೇ ಕೆಆರ್‌ಎಸ್ ಪಕ್ಷದ ತಾಲ್ಲೂಕು ಅಧ್ಯಕ್ಷ ನಾಗರಾಜ್ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಘಟನೆಯ ವೇಳೆ ಅಲ್ಲಿದ್ದ ದಲ್ಲಾಳಿಗಳು ಪರಾರಿಯಾದರೆ, ರೈತರು ಕೆ.ಆರ್.ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
