ವರದಿಗಾರರು :
ರಾಮಚಂದ್ರ ಕುಲಕರ್ಣಿ ಜಿಲ್ಲಾ ವರದಿಗಾರರು ವಿವ ನ್ಯೂಸ್ ಕೊಪ್ಪಳ ||
ಸ್ಥಳ :
ಕುಷ್ಟಗಿ
ವರದಿ ದಿನಾಂಕ :
22-07-2025
ಇ-ಪೌತಿ ಖಾತೆ ಆಂದೋಲನಕ್ಕೆ ಚಾಲನೆ.
ಕುಷ್ಟಗಿ : ತಾಲೂಕಿನ ನಾನಾ ಗ್ರಾಮಗಳಲ್ಲಿ ಪೌತಿ ಖಾತೆ ಅಂದೋಲನ ಆರಂಭಿಸುವುದಾಗಿ ಕುಷ್ಟಗಿ ತಾಲೂಕಿನ ತಹಸಿಲ್ದಾರ್ ಅಶೋಕ್ ಶಿಗ್ಗಾವಿ ತಿಳಿಸಿದ್ದಾರೆ. ಪ್ರಕಟಣೆ ನೀಡಿರುವ ಅವರು, ರಾಜ್ಯ ಸರ್ಕಾರ ರೈತರ ಸಲುವಾಗಿ ಪೌತಿ ಖಾತೆ ಅಂದೋಲನ (ಇ-ಪೌತಿ) ಆರಂಭಿಸಿದೆ ಪೌತಿ ಆದಂತಹ ಖಾತೆದಾರರ ಹೆಸರು ತೆಗೆದು ಅವರ ವಂಶಸ್ಥರ ಹೆಸರನ್ನು ವಂಶವೃಕ್ಷ ಪ್ರಮಾಣ ಪತ್ರದ ಪ್ರಕಾರ ದಾಖಲಿಸಲು ಅವಕಾಶ ಕಲ್ಪಿಸಿದೆ. ಕುಷ್ಟಗಿ ತಾಲೂಕಿನಲ್ಲಿ 16,963 ಪೌತಿ ಖಾತೆದಾರರು ಇದ್ದಾರೆ ಎಂದರು.
