ವರದಿಗಾರರು :
ಡಾ. ಜ್ಯೋತಿ ||
ಸ್ಥಳ :
ತುಮಕೂರು
ವರದಿ ದಿನಾಂಕ :
28-10-2025
ಬೀದರ್: ದುಷ್ಕರ್ಮಿಗಳ ಕೃತ್ಯದಿಂದ ರೈತನ ಸೋಯಾ ಬಣವೆ ಭಸ್ಮ
ಔರಾದ್ ತಾಲೂಕಿನ ನಾಗೂರ್ (ಬಿ) ಗ್ರಾಮದ ರೈತ ಶಿವಕುಮಾರ್ ಅವರ ಹೊಲದಲ್ಲಿದ್ದ ಸೋಯಾಬಿನ್ ಬಣವೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಸುಮಾರು 30 ಕ್ವಿಂಟಲ್‌ಗಳಷ್ಟು ಸೋಯಾಬಿನ್ ಸಂಪೂರ್ಣವಾಗಿ ಸುಟ್ಟು ಕರಕಾಗಿದೆ.
ಶಿವಕುಮಾರ್ ಅವರು 3.25 ಎಕರೆ ಜಮೀನಿನಲ್ಲಿ ಬೆಳೆದಿದ್ದ ಸೋಯಾ ಬೆಳೆ ಕಟಾವು ಮಾಡಿ ರಾಶಿ ಹಾಕಿ ಬಣವೆ ರೂಪಿಸಿದ್ದರು. ರವಿವಾರ ರಾತ್ರಿ ಅಜ್ಞಾತರು ಬೆಂಕಿ ಹಚ್ಚಿದ ಪರಿಣಾಮ, ಸುಮಾರು ₹1 ಲಕ್ಷದಿಂದ ₹1.5 ಲಕ್ಷ ಮೌಲ್ಯದ ಸೋಯಾಬಿನ್ ಹಾನಿಯಾಗಿದೆ.
ಇದೇ ತಿಂಗಳ 23ರಂದು ಔರಾದ್ ತಾಲೂಕಿನ ಜೋಜನಾ ಗ್ರಾಮದ ರೈತ ಹನುಮಂತ ಅವರ ಬಣವೆಯಿಗೂ ಇದೇ ರೀತಿಯ ಬೆಂಕಿ ಹಚ್ಚುವ ಘಟನೆ ನಡೆದಿತ್ತು. ಕೆಲವೇ ದಿನಗಳಲ್ಲಿ ಮತ್ತೊಮ್ಮೆ ನಡೆದ ಘಟನೆ ರೈತರಲ್ಲಿ ಆತಂಕ ಉಂಟುಮಾಡಿದೆ.
ಘಟನಾ ಸ್ಥಳಕ್ಕೆ ಕುಶನೂರ್ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
