ವರದಿಗಾರರು :
ನಜ್ರುಲ್ಲಾ ಬೇಗ್ ||
ಸ್ಥಳ :
ತುಮಕೂರು
ವರದಿ ದಿನಾಂಕ :
24-10-2025
ತುಮಕೂರು: ಗ್ರಾಮೀಣ ಮಹಿಳೆಗಳಿಗೆ ಉಚಿತ ಕೋಳಿ ಮರಿಗಳು
ತುಮಕೂರು: ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಗುಬ್ಬಿ ಮತ್ತು ಪಾವಗಡ ತಾಲ್ಲೂಕಿನ ಗ್ರಾಮೀಣ ರೈತ ಮಹಿಳೆಯರಿಗೆ ಉಚಿತವಾಗಿ ದೇಶಿ ಕೋಳಿ ಮರಿಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಿದೆ. ಅರ್ಹರು 5 ವಾರದ ತಲಾ 20 ಕೋಳಿ ಮರಿಗಳನ್ನು ಪಡೆಯಬಹುದಾಗಿದೆ. ಅರ್ಜಿಗಳೊಂದಿಗೆ ಬಿಪಿಎಲ್ ಕಾರ್ಡ್, ಗುರುತಿನ ಚೀಟಿ/ಆಧಾರ್ ಕಾರ್ಡ್ ಮತ್ತು ಮೀಸಲಾತಿ ಬಯಸುವವರು ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಬೇಕು ಎಂದು ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
