ವರದಿಗಾರರು :
ಹುಲಗಪ್ಪ ಎಮ್, ಹವಲ್ದಾರ ||
ಸ್ಥಳ :
ಯಾದಗಿರಿ
ವರದಿ ದಿನಾಂಕ :
05-11-2025
ದೇವಪುರ ವಿದ್ಯಾರ್ಥಿಗಳ ಬಿಲ್ಲುಗಾರಿಕೆ ಸಾಧನೆ – 4ನೇ ಮಿನಿ ಒಲಿಂಪಿಕ್ಸ್ 2025
ಯಾದಗಿರಿ ಜಿಲ್ಲೆ, ಸುರಪುರ ತಾಲ್ಲೂಕಿನ ದೇವಪುರ ಗ್ರಾಮದ ಬಿಲ್ಲುಗಾರಿಕೆ ಪ್ರತಿಭೆಗಳು 4 ಮತ್ತು 5 ನವೆಂಬರ್ 2025 ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ 4ನೇ ಮಿನಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಶ್ರೇಷ್ಠ ಸಾಧನೆ ಮಾಡಿಕೊಂಡಿದ್ದಾರೆ. ಪ್ರಮುಖ ಸಾಧನೆಗಳು: ಕುಮಾರಿ ಅನ್ನಪೂರ್ಣ – ಎಲಿಮಿನೇಷನ್ ರೌಂಡ್ ಪ್ರಥಮ ಸ್ಥಾನ, 30 ಮೀ ರೌಂಡ್ ದ್ವಿತೀಯ ಸ್ಥಾನ ಬಾಲಕರ ವಿಭಾಗದಲ್ಲಿ ಕು ಪ್ರದೀಪ್ – 30 ಮೀ ರೌಂಡ್ ತೃತೀಯ ಸ್ಥಾನ
ಈ ಸಾಧನೆಯಿಂದ ದೇವಪುರ ಗ್ರಾಮದಿಂದ ಒಟ್ಟು 1 ಚಿನ್ನ, 1 ಬೆಳ್ಳಿ, 2 ಕಂಚಿನ ಪದಕಗಳು ಗ್ರಾಮಕ್ಕೆ ಬಂದವು. ಕ್ರೀಡಾಪಟುಗಳ ಸಾಧನೆಗಾಗಿ ವನವಾಸಿ ಕಲ್ಯಾಣ ರಿ ಕರ್ನಾಟಕ ಸಂಸ್ಥೆಯ ಹಿರಿಯರು, ಗೌರವ ಪದಾಧಿಕಾರಿಗಳು, ಗ್ರಾಮಸ್ಥರು, ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರು ಮತ್ತು ಕ್ರೀಡಾಭಿಮಾನಿಗಳು ಹರ್ಷ ವ್ಯಕ್ತಪಡಿಸಿದರು. ಅಲ್ಲದೆ, ಏಕಲವ್ಯ ಬಿಲ್ಲುಗಾರಿಕೆ ಕ್ರೀಡಾ ತರಬೇತುದಾರ ಮೌನೇಶ್ ಕುಮಾರ್ ಮತ್ತು ಕರ್ನಾಟಕ ಆರ್ಚರಿ ಕೋಚ್ ಅನಿಲ್ ಕುಮಾರ್ ಸಹ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
