ವರದಿಗಾರರು :
ಬಸವರಾಜ ಪೂಜಾರಿ ||
ಸ್ಥಳ :
ಬೀದರ
ವರದಿ ದಿನಾಂಕ :
01-12-2025
ಮಾಸಿಕ ಶರಣ ಚಿಂತನ ಗೋಷ್ಠಿ: “ಮೇದಾರ ಕೇತಯ್ಯರ ಕುರಿತು ವಿಶೇಷ ಉಪನ್ಯಾಸ”
ಗೋಷ್ಠಿಯ ಮೇದಾರ ಕೇತಯ್ಯರ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಶುಕ್ರವಾರ ಸಂಜೆ 6 ಗಂಟೆಗೆ ಜರುಗಿತು. ಕಾರ್ಯಕ್ರಮ ಉದ್ಘಾಟನೆ: ಬೀದರ ಡೈಯಟ್ ಕಾಲೇಜಿನ ಉಪನ್ಯಾಸಕರಾದ ಗೀತಾ ಗಡ್ಡಿ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ಲಿಂಗಾಯತ ಧರ್ಮದ ತತ್ವಗಳ ಕುರಿತು ವಿವರಿಸಿ, “ಕಾಯಕವೇ ಕೈಲಾಸ, ಜಾತಿ ರಹಿತ ಸಮಾಜ ನಿರ್ಮಾಣ, ಶೋಷಣೆ ರಹಿತ ಮತ್ತು ವೈಜ್ಞಾನಿಕ ಧರ್ಮ ಸ್ಥಾಪನೆ” ಮುಖ್ಯ ಉದ್ದೇಶ ಎಂದು ಹೇಳಿದರು. ಬಸವಣ್ಣನವರು ಸಕಲ ಜೀವಿಗಳ ಕಲ್ಯಾಣ ಬಯಸಿದ ಮಹಾತ್ಮರಾಗಿದ್ದು, ಶರಣರ ತತ್ತ್ವವನ್ನು ಅನುಸರಿಸುವುದೇ ಜೀವನ ಸಾರ್ಥಕತೆ ಎಂದು ಅವರು ಹೇಳಿದರು.
ಪ್ರವಚನ: ಪ್ರವಚನಕಾರರಾದ ಸುವರ್ಣಾ ಚಿಮಕೋಡೆ ರವರು ಮೇದಾರ ಕೇತಯ್ಯರ ಜೀವನ ಮತ್ತು ಸಾಧನೆಗಳ ಕುರಿತು ವಿವರಿಸಿದರು. ಕೇತಯ್ಯನವರು ಬಿದರಿನಿಂದ ಬುಟ್ಟಿ ತಯಾರಿಸುವ ಕಾಯಕದಲ್ಲಿ ತೊಡಗಿದವರು. ಅವರ ಪತ್ನಿ ಸಾತವ್ವೆ. ಅವರು ಕೇವಲ 18 ವಚನಗಳನ್ನು ರಚಿಸಿದ್ದಾರೆ, ಆದರೆ ಶರಣರ ವಚನಗಳನ್ನು ಸಮಾಜಕ್ಕೆ ಪ್ರಸಾರ ಮಾಡುವಲ್ಲಿ ಮಹತ್ವಪೂರ್ಣ ಪಾತ್ರ ವಹಿಸಿದರು. ಅವರ ಶ್ರಮ ಮತ್ತು ಪರಿಶುದ್ಧತೆಯನ್ನು ಉದಾಹರಣೆಯಾಗಿ, ಕೇತಯ್ಯನವರು ಬಿದಿರನ್ನು ತರುವಾಗ ಎದುರಾದ ಆಘಾತಗಳಿಗೆ ತಡವಿಲ್ಲದೆ, ದಾಸೋಹ ಮತ್ತು ಕಾಯಕವನ್ನು ನಿರಂತರವಾಗಿ ನಿರ್ವಹಿಸಿದ್ದರು. ಇದರ ಮೂಲಕ ಅವರು ತತ್ವದ ಆಧ್ಯಾತ್ಮಿಕ ಶಕ್ತಿಯನ್ನು ಪ್ರತಿಪಾದಿಸಿದ್ದರು
ವಚನ ಸಾಹಿತ್ಯ ಮತ್ತು ಶಿಕ್ಷಣ: ವಚನ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಉಮಾಕಾಂತ ಮೀಸೆ ಅವರು, “ಮಕ್ಕಳಲ್ಲಿ ಮತ್ತು ಮನೆಮಾತಿನಲ್ಲಿ ಬಸವ ತತ್ವದ ಸಂಸ್ಕೃತಿ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವುದು ಅಗತ್ಯ” ಎಂದರು. ಶರಣ ಚಿಂತನ ಗೋಷ್ಠಿಯು ತತ್ವವನ್ನು ಮನೆಮನೆಗೆ ತಲುಪಿಸುವ ಜಂಗಮ ಕಾರ್ಯಕ್ರಮವಾಗಿದೆ ಎಂದು ಹೇಳಿದರು. ಮುಖ್ಯ ಅತಿಥಿಗಳು: ಗುರುದತ್ತ ಧ್ಯಾನ ಮಂದಿರದ ಸಂಚಾಲಕರು ವೀರಶೆಟ್ಟಿ ಕಾಗಾ, ಜಗನ್ಮಾತೆ ಅಕ್ಕಮಹಾದೇವಿ ಚಲನಚಿತ್ರ ನಿರ್ದೇಶಕ ವಿಷ್ಣುಕಾಂತರ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಂಸ್ಕೃತಿಕ ಕಾರ್ಯಕ್ರಮಗಳು: ಅಕ್ಕನ ಬಳಗದವರಿಂದ ವಚನ ಸಂಗೀತ ಸುರೇಖಾ ಬಾಬುರಾವ ಹುಲಸೂರೆಯವರು ಗುರುಬಸವ ಪೂಜೆ ನೇರವೇರಿಸಿದರು ಜಗನ್ಮಾತೆ ಅಕ್ಕಮಹಾದೇವಿಯ ಚಲನಚಿತ್ರ ಭಿತ್ತಿಪತ್ರ ಬಿಡುಗಡೆ ಅಧ್ಯಕ್ಷತೆ ಮತ್ತು ನಿರೂಪಣೆ: ಜಿಲ್ಲಾಧ್ಯಕ್ಷ ಸುನಿತಾ ದಾಡಗೆ ರವರು ಅಧ್ಯಕ್ಷತೆ ವಹಿಸಿ, ಮನಸ್ಸಿನ ಶುದ್ಧೀಕರಣ ಮತ್ತು ತತ್ವ ಪ್ರಚಾರ ಮಹತ್ವವನ್ನು ಹೇಳಿದರು. ಸುರೇಖಾ ಹುಲಸೂರ ಸ್ವಾಗತ ಕೋರಿ, ಬಸವರಾಜ ಮೂಲಗೆ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀನಿವಾಸ ಬಿರಾದಾರ ವಂದನೆ ಸಲ್ಲಿಸಿದರು.
ಪ್ರಮುಖ ಉಪಸ್ಥಿತಿಗಳು: ಅಶೋಕ ಬೂದಿಹಾಳ, ಕಲ್ಯಾಣರಾವ ಚಳಕಾಪೂರೆ, ಶೈಲಜಾ ಚಳಕಾಪೂರೆ, ಸಿದ್ರಾಮಪ್ಪ ಕಪಲಾಪೂರೆ ಮತ್ತು ಅನೇಕ ಶರಣರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
