ವರದಿಗಾರರು :
ಸಿಂಚನ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
10-10-2025
ಬಿಗ್ ಬಾಸ್ ಕನ್ನಡ ಚಿತ್ರೀಕರಣಕ್ಕೆ ಸಹಾಯ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ಕಿಚ್ಚ ಸುದೀಪ್ ಧನ್ಯವಾದ
ಬೆಂಗಳೂರು – ಜಾಲಿವುಡ್ ಆವರಣದಲ್ಲಿ ನಡೆಯುತ್ತಿರುವ ‘ಬಿಗ್ ಬಾಸ್ ಕನ್ನಡ’ ಶೋ ಚಿತ್ರೀಕರಣಕ್ಕೆ ಆಗಿದ್ದ ಅಡೆತಡೆಗಳನ್ನುCLEAR ಮಾಡಲಾಗಿದ್ದು, ಇದಕ್ಕೆ ನೆರವಾದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ನಟ ಹಾಗೂ ನಿರೂಪಕ ಕಿಚ್ಚ ಸುದೀಪ್ ಅವರು ಧನ್ಯವಾದ ವ್ಯಕ್ತಪಡಿಸಿದ್ದಾರೆ.
ಎಕ್ಸ್ (ಹಳೆ ಟ್ವಿಟ್ಟರ್)ನಲ್ಲಿ ತಮ್ಮ ಭಾವನೆ ಹಂಚಿಕೊಂಡ ಸುದೀಪ್, “ಸಮಯಕ್ಕೆ ಸರಿಯಾಗಿ ಬೆಂಬಲ ನೀಡಿದ ಡಿಸಿಎಂ ಡಿಕೆಶಿಗೆ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇತ್ತೀಚಿನ ಅಡಚಣೆಗಳಲ್ಲಿ ಬಿಗ್ ಬಾಸ್ ಕನ್ನಡ ಭಾಗಿಯಾಗಿಲ್ಲ ಎಂಬುದನ್ನು ಒಪ್ಪಿಕೊಂಡ ಅಧಿಕಾರಿಗಳಿಗೆ ನಾನು ಧನ್ಯವಾದ ಹೇಳಲು ಇಚ್ಛಿಸುತ್ತೇನೆ,” ಎಂದು ತಿಳಿಸಿದ್ದಾರೆ.
ಅವರು ಮುಂದುವರೆದು, “ನನ್ನ ಕರೆಗೆ ತಕ್ಷಣ ಸ್ಪಂದಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಹಾಗೂ ನಲ್ಪಾಡ್ ಅವರ ಶ್ರಮಕ್ಕೆ ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ. ಬಿಬಿಕೆ12 ಇಸ್ ಹಿಯರ್ ಟು ಸ್ಟೇ,” ಎಂದು ತಮ್ಮ ಟ್ವೀಟ್‌ನಲ್ಲಿ ಹೇಳಿದ್ದಾರೆ.
ಇತ್ತೀಚೆಗೆ ಜಾಲಿವುಡ್ ಆವರಣದಲ್ಲಿ ನಡೆದ ವ್ಯವಸ್ಥಾಪನಾ ತೊಂದರೆಗಳಿಂದ ಬಿಗ್ ಬಾಸ್ ಚಿತ್ರೀಕರಣಕ್ಕೆ ತಾತ್ಕಾಲಿಕ ವಿಳಂಬವಾಗಿದ್ದರೂ, ಸರ್ಕಾರದ ಹಸ್ತಕ್ಷೇಪದಿಂದ ಸಮಸ್ಯೆ ಪರಿಹಾರಗೊಂಡಿದೆ. ಈಗ ಚಿತ್ರೀಕರಣ ಸುಗಮವಾಗಿ ಮುಂದುವರಿಯುತ್ತಿದೆ.
