ವರದಿಗಾರರು :
ಶ್ರೀನಿವಾಸ್ ಹೆಚ್ ||
ಸ್ಥಳ :
ತುಮಕೂರು
ವರದಿ ದಿನಾಂಕ :
14-11-2025
“ನವದೆಹಲಿಯ ಕಾರು ಸ್ಫೋಟ ಹಿನ್ನೆಲೆ: ತುಮಕೂರಿನ ಮುಜಾಯುದ್ದೀನ್ ವಿಚಾರಣೆ ಬಳಿಕ ಬಿಡುಗಡೆ”
ತುಮಕೂರು: ನವದೆಹಲಿಯಲ್ಲಿ ಇತ್ತೀಚೆಗೆ ಸಂಭವಿಸಿದ ಕಾರು ಸ್ಫೋಟದ ಪ್ರಕರಣದ ಹಿನ್ನೆಲೆ, ತುಮಕೂರು ನಗರದ ಪಿ.ಎಚ್. ಕಾಲೋನಿ ನಿವಾಸಿ ಮುಜಾಯುದ್ದೀನ್ ಅವರನ್ನು ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪೊಲೀಸರು ವಿಚಾರಣೆ ನಡೆಸಿದರು. ಪ್ರಾಥಮಿಕ ವಿಚಾರಣೆಯಲ್ಲಿ ಸ್ಫೋಟ ಘಟನೆಯಲ್ಲಿ ಅವರ ಭಾಗಿತ್ವ ಕಂಡುಬರಲಿಲ್ಲ ಎಂಬ ಕಾರಣದಿಂದ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಮುಜಾಯುದ್ದೀನ್ ಅವರು ಪೂರ್ವದಲ್ಲಿ ‘ಕಲಿಫತ್’ ಎಂಬ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದರು ಎಂಬ ಆರೋಪ ಪ್ರತಾಪಟ್ಟಿದ್ದು, ಇದೇ ಹಿನ್ನೆಲೆಯಲ್ಲಿ ಹಿಂದೆ ಎನ್‌ಐಎ ಅಧಿಕಾರಿಗಳು ಅವರ ವಿರುದ್ಧ ತನಿಖೆ ನಡೆಸಿದ್ದರು. ಆ ಪ್ರಕರಣದಲ್ಲಿ ಅವರಿಗೆ ತಿಹಾರ್ ಜೈಲಿನಲ್ಲಿ ಆರು ತಿಂಗಳ ಶಿಕ್ಷೆ ವಿಧಿಸಲಾಗಿತ್ತು. ಶಿಕ್ಷೆ ಅನುಭವಿಸಿ ಬಿಡುಗಡೆಯಾದ ನಂತರ ಅವರು ತುಮಕೂರಲ್ಲಿ ವಾಸವಾಗಿದ್ದಾರೆ.
ನವದೆಹಲಿಯ ಸ್ಫೋಟ ಪ್ರಕರಣಕ್ಕೆ ಯಾವುದೇ ನೇರ ಸಂಪರ್ಕ ಕಂಡುಬರದ ಹಿನ್ನಲೆಯಲ್ಲಿ ಹೆಚ್ಚಿನ ವಿಚಾರಣೆ ನಂತರ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ವರದಿಗಳಲ್ಲಿ ತಿಳಿಸಲಾಗಿದೆ.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
