ವರದಿಗಾರರು :
ಹುಲಗಪ್ಪ ಎಮ್ ಹವಾಲ್ದಾರ ||
ಸ್ಥಳ :
ಸುರಪುರ
ವರದಿ ದಿನಾಂಕ :
07-04-2025
ಗ್ರಾಮೀಣ ಪ್ರದೇಶದ ಯುವಕರಿಗೆ ಸ್ಫೂರ್ತಿ ತುಂಬುವ ಕೆಲಸ ಮಾಡಬೇಕು ಶ್ರೀ ರಾಜ ವೇಣುಗೋಪಾಲ ನಾಯಕ ಶಾಸಕರು
ಸುರಪುರ ನಗರದ ಶ್ರೀ ಪ್ರಭು ಮಹಾವಿದ್ಯಾಲಯದಲ್ಲಿ ಪ್ರತಿಷ್ಠಿತ ಕ್ರಿಕೆಟ ಟೂರ್ನಿ ಮಿಂಟ ದಿವಂಗತ.ರಾಜಾ ವೆಂಕಟಪ್ಪ ನಾಯಕ ಮಾಜಿ ಶಾಸಕರು ದಿವಂಗತ.ರಾಜಾ ಶ್ರೀರಾಮ ನಾಯಕ ಅವರ ಸ್ಮರಣಾರ್ಥವಾಗಿ ಆರ್ ಕೆ ಎನ್ ಟ್ರೋಫಿ ಯ ಪೈನಲ ಮ್ಯಾಚಿಗೆ ಚಾಲನೆ ನೀಡಿ ಪೈನಲ್ ವಿಜೇತ ಆರ್ ವಿ ಎನ್ ರಾಯಗೋಳ ತಂಡಕ್ಕೆ ಸುರಪುರ ಮತಕ್ಷೇತ್ರ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ರಾಜಾ ವೇಣುಗೋಪಾಲ ನಾಯಕ ಅವರು ಆಕರ್ಷಕ ಟ್ರೋಫಿ ಬಹುಮಾನ ವಿತರಿಸಿದರು
ಇದೇ ವೇಳೆ ಮಾತನಾಡಿ ನಮ್ಮ ಹಳ್ಳಿ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಬೆಳೆಸಬೇಕು ಮತ್ತು ಅವರಿಗೆ ದೈಹಿಕವಾಗಿ ಮತ್ತು ಬೆಳೆಯಲು ನಾವು ಅವಕಾಶ ಮಾಡಿಕೊಡಬೇಕು ಒಂದೆ ಮಾತಿನಲ್ಲಿ ಹೇಳುವುದಾದರೆ ಹಳ್ಳಿಯಲ್ಲಿ ಇರುವಂತಹ ಗಂಡೆದೆಯ ಪ್ರತಿಭೆಗಳು ಸಿಟಿಯಲ್ಲಿ ಸಿಗಲು ಸಾಧ್ಯವೇ ಇಲ್ಲ ಎಂದು ಹೇಳಿದರು ಆದ್ದರಿಂದ ಯುವಕರು ಆಟದಲ್ಲಿ ಶಿಕ್ಷಣದಲ್ಲಿ ಮುಂದೆ ಬರಬೇಕು ನಮ್ಮ ಹಳ್ಳಿಯ ಯುವಕರು ರಾಜ್ಯ ಮಟ್ಟದಲ್ಲಿ ಮತ್ತು ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಬೇಕು ಅದಕ್ಕೆ ನಮ್ಮ ಬೆಂಬಲ ಯಾವಾಗಲೂ ಇರುತ್ತದೆ ಎಂದು ಯುವಕರಿಗೆ ಸ್ಫೂರ್ತಿ ತುಂಬಿದರು
ಮತ್ತು ಸುರಪುರ ಸಂಸ್ಥಾನದ ರಾಜಾ ಕೃಷ್ಣಪ್ಪ ನಾಯಕ ಧಣಿ ಮತ್ತು ವಿಠ್ಠಲ ಯಾದವಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು..
ಈ ಸಂದರ್ಭದಲ್ಲಿ ಯುವ ನಾಯಕರು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಹಾಗೂ ಕಾಂಗ್ರೆಸ್ ಪಕ್ಷದ ಯುವಕರು ಮತ್ತು ಅನೇಕ ಗಣ್ಯಮಾನ್ಯರು ಕ್ರಿಕೆಟ್ ತಂಡದ ಹಲವಾರು ಅಭಿಮಾನಿಗಳು ಭಾಗವಹಿಸಿದರು*
