ವರದಿಗಾರರು :
ರಮೇಶ್ ಅಂಗಡಿ ||
ಸ್ಥಳ :
ಬಾಗಲಕೋಟೆ
ವರದಿ ದಿನಾಂಕ :
27-10-2025
ಚಿಮ್ಮಡ ಕಬಡ್ಡಿ ವೈಭವ 2025: ದೀಪಾವಳಿಗೆ ಮುಕ್ತ ಕಬಡ್ಡಿ ಪಂದ್ಯಾವಳಿ
ಬಾಗಲಕೋಟೆ: ರಬಕವಿ-ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದಲ್ಲಿ ಸತತ ಮೂರನೇ ಬಾರಿ ಓಂ ಪ್ರಭುಲಿಂಗೇಶ್ವರ ಯುವಕರ ಕ್ರೀಡಾ ಸಂಘ (ರಿ.) ದೀಪಾವಳಿ ಹಬ್ಬದ ಪ್ರಯುಕ್ತ ಮುಕ್ತ ಕಬಡ್ಡಿ (ಓಪನ್) “ಚಿಮ್ಮಡ ಕಬಡ್ಡಿ ವೈಭವ 2025” ಅನ್ನು ಆಯೋಜಿಸಿತು.
ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಬಾಗಲಕೋಟ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರು ಹಾಗೂ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ವೀಣಾ ವಿಜಯಾನಂದ ಕಾಶಪ್ಪ ಭಾಗವಹಿಸಿ, ಕ್ರೀಡಾಪಟುಗಳಿಗೆ ಶುಭಕೋರಿದರು ಮತ್ತು ಫೈನಲ್ ಪಂದ್ಯಾವಳಿಯನ್ನು ವೀಕ್ಷಿಸಿದರು. ಈ ಕಾರ್ಯಕ್ರಮವು ಗ್ರಾಮದಲ್ಲಿ ಕ್ರೀಡೆಗೆ ಉತ್ತೇಜನ ನೀಡಿದ್ದು, ಯುವಕರಿಗೆ ಕ್ರೀಡಾ ಪ್ರತಿಭೆಯನ್ನು ತೋರಿಸುವ ಉತ್ತಮ ವೇದಿಕೆ ಒದಗಿಸಿದೆ.
