ವರದಿಗಾರರು :
ಬಸವರಾಜ್, ಕಕ್ಕುಪ್ಪಿ ||
ಸ್ಥಳ :
ಕೊಪ್ಪಳ
ವರದಿ ದಿನಾಂಕ :
16-10-2025
ಕೊಪ್ಪಳ ಜಿಲ್ಲೆ ಮೆಥ ಗಾಲ್ ನಲ್ಲಿ ರೈತ ತರಬೇತಿ ಕಾರ್ಯಗಾರ ಮತ್ತು ಪ್ರೋಸೆಸಿಂಗ್ ಯುನಿಟ್ ಲೋಕಾರ್ಪಣೆ
ಈ ದಿನ ಬೆಳಿಗ್ಗೆ ಕೇಂದ್ರ ಹಣಕಾಸು ಸಚಿವರಾದಂತಹ ಶ್ರೀಮತಿ ನಿರ್ಮಲ ಸೀತಾರಾಮ್ ಅವರು ಕೊಪ್ಪಳ ಜಿಲ್ಲೆಯ ಮೆಥಾಗಲ್ ನಲ್ಲೀ ರೈತ ಉತ್ಪಾದಕರ ಎಫ್ ಪಿ ಓ ಕಂಪನಿಯ ವತಿಯಿಂದ ಮತ್ತುನಬಾರ್ಡ್ ಹಣಕಾಸು ನೆರವಿನೊಂದಿಗೆ ರೈತರ ಸೇವಾ ಕಾರ್ಯಗಾರ ಮತ್ತು ಮೌಲ್ಯವರ್ಧಿತ ಪ್ರೊಸೆಸಿಂಗ್ ಯುನಿಟನ್ನು ಪ್ರಾರಂಭಿಸಲಾಯಿತು ಈ ಸಂದರ್ಭದಲ್ಲಿ ಶ್ರೀಮತಿ ನಿರ್ಮಲ ಸೀತಾರಾಮ್ ಅವರು ಮಾತನಾಡಿ ರೈತರು ತಾವು ಬೆಳೆದ ಬೆಳೆಯನ್ನು ನೇರವಾಗಿ ಮಾರಾಟ ಮಾಡದೆ ಮೌಲ್ಯವರ್ಧಿತವಾಗಿ ಮಾರಾಟ ಮಾಡಿದಲ್ಲಿ ಹೆಚ್ಚಿನ ಲಾಭ ಗಳಿಸಬಹುದು ಮತ್ತು ಉತ್ತಮ ಗುಣಮಟ್ಟದ ಉತ್ಪನ್ನವನ್ನು ಗ್ರಾಹಕರಿಗೆ ತಲುಪಿಸಬಹುದು ಎಂದು ಹೇಳಿದರು ರೈತರು ಲಾಭಗಳಿಸಬೇಕಾದರೆ ತಾವು ಬೆಳೆದ ಬೆಳೆಗಳನ್ನು ಮೌಲ್ಯವರ್ಧನೆ ಮಾಡಿ ಅನೇಕ ಪ್ರಾಡಕ್ಟ್ ಗಳನ್ನು ತಯಾರು ಮಾಡಿ ಅದನ್ನು ಗ್ರಾಹಕರಿಗೆ ತಲುಪಿಸುವ ಮೂಲಕ ಹೆಚ್ಚಿನ ಆದಾಯವನ್ನು ಗಳಿಸಿಕೊಳ್ಳಲು ಇಂತಹ ಕಾರ್ಯಕ್ರಮಗಳನ್ನು ನಾವು ತಂದಿದ್ದೇವೆ ಎಂದು ಹೇಳಿದರು ಇದು ರೈತರಿಂದ ರೈತರಿಗಾಗಿಯೇ ರೈತರಿಗೋಸ್ಕರ ನಡೆಸುವಂತಹ ಕಾರ್ಯಕ್ರಮವಾಗಿದ್ದು ಇಂತಹ ಯೋಜನೆಯ ಲಾಭವನ್ನು ಎಲ್ಲಾ ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಮತ್ತು ಉತ್ತಮ ಮಾರುಕಟ್ಟೆಯನ್ನು ಕೂಡ ರೂಪಿಸಿಕೊಳ್ಳಬಹುದು ಎಂದು ಹೇಳಿದರು. ಟೊಮೊಟೊ ಹಣ್ಣಿನಿಂದ ಟೊಮೇಟೊ ಕೆಚಪ್ ಜ್ಯೂಸ್ ಸಾಸ್ ಇನ್ನು ಅನೇಕ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡಿ ಉತ್ತಮ ಗುಣಮಟ್ಟದ ಆಹಾರವನ್ನು ಜನತೆಗೆ ನೀಡಿ ಎಂದು ಕರೆ ಕೊಟ್ಟರು ಈ ಸಂದರ್ಭದಲ್ಲಿ ಶಾಸಕರಾದ ಜನಾರ್ಧನ ರೆಡ್ಡಿ ಅವರು ಮಾತನಾಡಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಇಂತಹ ಯೋಜನೆಗಳು ರೈತರಿಗೆ ಅನೇಕ ರೀತಿ ಉಪಯೋಗವಾಗಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳುವುದರ ಜೊತೆಗೆ ರೈತ ಉತ್ಪಾದಕರ ಕಂಪನಿಗಳು ಮತ್ತು ರೈತ ಉತ್ಪಾದಕ ಸಂಸ್ಥೆಗಳು ಗುಣಮಟ್ಟದ ಆಹಾರವನ್ನು ನೀಡುವುದರ ಜೊತೆಗೆ ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತದೆ ಎಂದು ಹೇಳಿದರು . ಆ ಸಂದರ್ಭದಲ್ಲಿ ಅಲ್ಲಿ ನೆರದಿರುವಂತಹ ಅನೇಕ ಜನರು ಅನೇಕ ರೈತ ಉತ್ಪಾದಕರ ಕಂಪನಿಗಳು ತಾವು ತಯಾರು ಮಾಡಿರುವಂತಹ ಉತ್ಪನ್ನಗಳನ್ನು ಮಾರಾಟ ಮಾಡುವುದರ ಜೊತೆಗೆ ತಾವು ಮಾಡಿದ ಉತ್ಪನ್ನವನ್ನು ಯಾವ ರೀತಿ ಗುಣಮಟ್ಟ ಇದೆ ಎಂದು ರೈತರಿಗೆ ತಿಳಿಸುತ್ತಾ ಮತ್ತು ಸುಮಾರು ರೈತ ಉತ್ಪಾದರ ಕಂಪನಿಗಳು ಸ್ಟಾರ್ ಗಳನ್ನು ತೆರೆದಿದ್ದು ಅವರು ತಯಾರು ಮಾಡಿರುವಂತಹ ಅನೇಕ ವಸ್ತುಗಳನ್ನು ಪ್ರದರ್ಶನಕ್ಕೆ ಮತ್ತು ಮಾರಾಟಕ್ಕೆ ಇಟ್ಟಿದ್ದು ವಿಶೇಷವಾಗಿತ್ತು
