ವರದಿಗಾರರು :
ಬಲರಾಮ್ ವಿ. ||
ಸ್ಥಳ :
ಕೆ ಆರ್ ಪುರ
ವರದಿ ದಿನಾಂಕ :
01-12-2025
ಮಗಳ ಜೀವ ರಕ್ಷಿಸಲು ಕಿಡ್ನಿ ತ್ಯಾಗ ಮಾಡಿದ ತಂದೆ.
ಮಹದೇವಪುರ: ಅನುವಂಶೀಯದಿಂದ ಬರುವ ಬಹು-ಗುಳ್ಳೆ ಮೂತ್ರಪಿಂಡ ರೋಗದಿಂದ ಬಳಲುತ್ತಿದ್ದ ಮಗಳಿಗೆ ತಂದೆಯೇ ಕಿಡ್ನಿ ದಾನ ಮಾಡಿರುವ ಹೃದಯವಂತಕ ಘಟನೆ ವೈಟ್ ಫೀಲ್ಡ್ ನ ಮೆಡಿಕವರ್ ಆಸ್ಪತ್ರೆಯಲ್ಲಿ ನಡೆದಿದೆ. ಕೆಲ ವರ್ಷಗಳ ಹಿಂದೆ ತನ್ನ ಪತ್ನಿಯು ಇದೇ ರೋಗದಿಂದ ಬಳಲುತ್ತಿದ್ದಳು, ಅವಾಗಲೂ ಕಿಡ್ನಿ ದಾನ ಮಾಡಲು ಮುಂದಾಗಿದ್ದರು. ಆದ್ರೆ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಕೆಲ ತಾಂತ್ರಿಕ ದೋಷದಿಂದ ಕಿಡ್ನಿ ಟ್ರಾನ್ಸ್ ಪ್ಲಾಟ್ ಮಾಡಲು ಸಾಧ್ಯವಾಗಿರಲಿಲ್ಲ
ಈಗ ಮತ್ತೆ ಅದೇ ಸಮಸ್ಯೆಯು ಮಗಳಿಗೆ ಕಾಡಿದ್ದು, ತಂದೆಯೇ ತನ್ನ ಮಗಳಿಗೆ ಕಿಡ್ನಿ ದಾನ ಮಾಡಲು ಮೂಲಕ ತನ್ನ ಮಗಳನ್ನು ಉಳಿಸಿಕೊಂಡಿದ್ದಾರೆ. ಬಳಿಕ ಮಾತನಾಡಿದ ಮೆಡಿಕವರ್ ವೈದ್ಯರಾದ ಡಾ.ಹರೀಶ್ ಬಾಬು ಅವರು ಸಮಗ್ರ ಮತ್ತು ನಿಖರವಾದ ವೈದ್ಯಕೀಯ ಮೌಲ್ಯಮಾಪನದ ಮೂಲಕ ನಿಯಂತ್ರಣದಲ್ಲಿರುವ ಮಧುಮೇಹ ಮತ್ತು ರಕ್ತದೊತ್ತಡ ಇದ್ದರೂ ಸಹ ಹಿರಿಯರನ್ನು ಕಿಡ್ನಿ ದಾನಕ್ಕೆ ಪರಿಗಣಿಸಬಹುದು ಎಂದು ಹೇಳಿದರು. ಈ ವೇಳೆ ವೈದ್ಯರಾದ ಡಾ. ಪ್ರಮೋದ್, ಡಾ.ದಿಲೀಪ್ ರವರು ಇದ್ದರು.
