ವರದಿಗಾರರು :
ಶ್ರೀನಿವಾಸ್ ಹೆಚ್ ||
ಸ್ಥಳ :
ತುಮಕೂರು
ವರದಿ ದಿನಾಂಕ :
05-11-2025
ಕೊರಟಗೆರೆ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಆಕ್ರೋಶ
ಕೊರಟಗೆರೆ: ಸೋಮವಾರ ಮುಂಜಾನೆ, ಬೆಂಗಳೂರಿಗೆ ಉದ್ಯೋಗದಿಗಾಗಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಕೆಎಸ್ ಆರ್ ಟಿಸಿ ಬಸ್ ವ್ಯವಸ್ಥೆಯ ಕೊರತೆಯಿಂದ ಅಸಮಾಧಾನ ವ್ಯಕ್ತಪಡಿಸಿದರು. ಪಾವಗಡ-ಮಧುಗಿರಿ ಮಾರ್ಗದ ಬಸ್ಸುಗಳು ಭರ್ತಿಯಾಗಿರುವುದರಿಂದ ನಿಲ್ದಾಣದಲ್ಲಿ ನಿಲ್ಲದೆ ಕೆಲವುವು ಬೈಪಾಸ್ ಮೂಲಕ ಹೋದವು. ಗಂಟೆಗಳ ಕಾಲ ಬಸ್ಸಿಗಾಗಿ ಕಾಯುತ್ತಿದ್ದ ಪ್ರಯಾಣಿಕರು ತೀವ್ರ ಅಸಮಾಧಾನದ ಮೂಲಕ ಕೆಲವು ನಿಮಿಷಗಳ ಕಾಲ ಬಸ್ಸನ್ನು ತಡೆಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಪ್ರಯಾಣಿಕರು ಬಸ್ ಚಾಲಕರು ಮತ್ತು ನಿರ್ವಾಹಕರಿಗೆ ತಕ್ಷಣ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು. ಸ್ಥಳಕ್ಕೆ ಬಂದ ಪೊಲೀಸರು ಮಧ್ಯಸ್ಥರಾಗುವ ಮೂಲಕ ವಾಗ್ವಾದವನ್ನು ನಿಲ್ಲಿಸಿ ಪ್ರಯಾಣಿಕರ ಸಂಚಾರಕ್ಕೆ ಸಹಾಯಕ ವ್ಯವಸ್ಥೆ ಕಲ್ಪಿಸಿದರು. ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಿಮ್ಮ ವಾಟ್ಸಾಪ್ ಗ್ರೂಪ್‌ಗೆ 7892441717 ಸಂಖ್ಯೆಯನ್ನು ಸೇರಿಸಿ
