ವರದಿಗಾರರು :
ಸಿದ್ದಾರ್ಥ್ ಗೌಡ, ||
ಸ್ಥಳ :
ಬೇಲೂರು
ವರದಿ ದಿನಾಂಕ :
01-12-2025
ಹಾಸನದ ವತ್ಸಲ (19) ಪಿಜಿಯಲ್ಲಿ ನೇ*.ಣು ಬಿಗಿದುಕೊಂಡು ಜೀವತ್ಯಾಗ
ಬೆಂಗಳೂರು ನಗರದ ಹೊರವಲಯದ ಹೆಸರುಘಟ್ಟ ರಸ್ತೆ ಬಳಿ ಇರುವ ಖಾಸಗಿ ಕಾಲೇಜೊಂದರಲ್ಲಿ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಆತ್ಮಹ*ಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಹಾಸನ ಮೂಲದ ವತ್ಸಲ (19) ಅವರು ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಬಿ.ಫಾರ್ಮ್ ಅಂತಿಮ ವರ್ಷದ ವ್ಯಾಸಂಗ ಮಾಡುತ್ತಿದ್ದರು. ಕಾಲೇಜಿನ ಸಮೀಪವಿರುವ ಪಿಜಿಯಲ್ಲಿ ವಾಸವಿದ್ದ ಈ ವಿದ್ಯಾರ್ಥಿನಿ ಗುರುವಾರ ರಾತ್ರಿ ನೇ*.ಣು ಬಿಗಿದುಕೊಂಡು ಜೀವತ್ಯಾಗಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ನಂತರ ಪಿಜಿ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಭೇಟಿ ನೀಡಿದ ಹೆಸರುಘಟ್ಟ ಪೊಲೀಸ್ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜೀವತ್ಯಾಗಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ವಿದ್ಯಾರ್ಥಿನಿ ಮ.ರ.ಣದ ಹಿನ್ನೆಲೆ ಪೋಷಕರು, ಸ್ನೇಹಿತರು ಮತ್ತು ಕಾಲೇಜು ವಲಯದಲ್ಲಿ ಆಘಾ*ತ ವ್ಯಕ್ತವಾಗಿದೆ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಶೀಲಿಸುತ್ತಿದ್ದು, ಮೊಬೈಲ್ ಫೋನ್, ಪಿಜಿಯ ಸಿಸಿಟಿವಿ ದೃಶ್ಯ ಸೇರಿದಂತೆ ವಿವಿಧ ಕೋಣೆಯಿಂದ ತನಿಖೆ ಮುಂದುವರಿಸಿದ್ದಾರೆ.
