ವರದಿಗಾರರು :
ದರ್ಶನ್ಎಂ.ಎನ್ ||
ಸ್ಥಳ :
ದಾವಣಗೆರೆ
ವರದಿ ದಿನಾಂಕ :
28-11-2025
ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿಯನ್ನು 112 ಪೊಲೀಸರು ರಕ್ಷಿಸಿದರು
ದಾವಣಗೆರೆ: ನ್ಯಾಮತಿ ತಾಲ್ಲೂಕಿನ ಕೊಡತಾಳ ಕ್ರಾಸ್ ಬಳಿ ತಾವು ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಶಿವಮೊಗ್ಗ ಮೂಲದ ಯುವತಿಯನ್ನು 112 ಸಿಬ್ಬಂದಿ ತಕ್ಷಣ ರಕ್ಷಿಸಿದ್ದಾರೆ. ಬುಧವಾರ ಬೆಳಗ್ಗೆ, 112 ಕರ್ತವ್ಯಾಧಿಕಾರಿಗಳಿಗೆ ಘಟನೆ ಬಗ್ಗೆ ಮಾಹಿತಿ ಬಂದಿತ್ತು. ಘಟನಾ ಸ್ಥಳಕ್ಕೆ ಭೇಟಿ ನೀಡಿದ 112 ಅಧಿಕಾರಿಗಳು ಬಸವರಾಜ್ ಮತ್ತು ಮಂಜಪ್ಪ, ಯುವತಿಯು ಕೆರೆಗೆ ಹಾರಿ ಆತ್ಮಹತ್ಯೆ ಮಾಡಲು ಯತ್ನಿಸುತ್ತಿದ್ದಾಗ ಅವಳನ್ನು ಸುರಕ್ಷಿತವಾಗಿ ಹೊರತೆಗೆಯುವಲ್ಲಿ ಯಶಸ್ವಿಯಾಗಿದರು.
ಯುವತಿಗೆ ಆತ್ಮಹತ್ಯೆ ಸಮಸ್ಯೆಗಳಿಗೆ ಪರಿಹಾರವಲ್ಲ ಎಂಬ ಅರಿವನ್ನೂ, ಬದುಕಲು ಧೈರ್ಯವಿರಬೇಕು ಎಂಬ ತಿಳುವಳಿಕೆಯನ್ನು ನೀಡಲಾಯಿತು. ನ್ಯಾಮತಿ ಠಾಣೆಗೆ ಮಾಹಿತಿ ನೀಡಿ, ಕುಟುಂಬ ಸದಸ್ಯರೊಂದಿಗೆ ಸಂಪರ್ಕ ಸಾಧಿಸಿ, ಸೂಕ್ತ ಸಹಾಯ ಒದಗಿಸಲಾಗಿದೆ. ಈ ಕಾರ್ಯಕ್ಕಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು 112 ಅಧಿಕಾರಿಗಳನ್ನು ಅಭಿನಂದಿಸಿದ್ದಾರೆ. ಸಾರ್ವಜನಿಕರಿಗೆ ಸೂಚನೆ: ತುರ್ತು ಪರಿಸ್ಥಿತಿಗಳಲ್ಲಿ 112 ತುರ್ತು ಸಹಾಯವಾಣಿಗೆ ಕರೆ ಮಾಡಬಹುದು.
