ವರದಿಗಾರರು :
ನಜ್ರುಲ್ಲಾ ಬೇಗ್ ||
ಸ್ಥಳ :
ತುಮಕೂರು
ವರದಿ ದಿನಾಂಕ :
13-09-2025
ಹೊಳಲ್ಕೆರೆ ತಾಲೂಕಿನಲ್ಲಿ ಸುಮಾರು 80 ಅಡಿಕೆ ಗಿಡಗಳನ್ನು ಕತ್ತರಿಸಿ ಹಾಕಿರುವ ದುಷ್ಕರ್ಮಿಗಳು
ಹೊಳಲ್ಕೆರೆ (tq) ಬಂಜಗೊಂಡನಹಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ದುಷ್ಕರ್ಮಿಗಳು ಬಂಜಗೊಂಡನಹಳ್ಳಿ ಗ್ರಾಮದ ವಾಸಿಯಾದ ಪಾಲಪ್ಪ ಅವರ ತೋಟದ ಅಡಿಕೆ ಗಿಡಗಳನ್ನು ಸುಮಾರು 80 ಗಿಡಗಳನ್ನು ಕತ್ತರಿಸಿದ್ದಾರೆ ತೋಟದ ಮನೆಯವರು ಗ್ರಾಮದಲ್ಲಿ ಮಾರಮ್ಮ ದೇವಿಯ ಜಾತ್ರೆ ಇರುವ ಕಾರಣದಿಂದ ತೋಟದ ಕಡೆ ಗಮನ ಹರಿಸಿಲ್ಲ ಜಾತ್ರೆ ಮುಗಿದ ನಂತರ ಹೋಗಿ ನೋಡಿದಾಗ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ,.
ತೋಟದ ಮನೆಯವರ ಕಣ್ಣೀರು ಆಕ್ರಂದನ ಮುಗಿಲು ಮುಟ್ಟಿದೆ ಇಂತಹ ಕೃತ್ಯ ಮಾಡಿದ ದುಷ್ಕರ್ಮಿಗಳನ್ನು ಆದಷ್ಟು ಬೇಗ ಕಂಡುಹಿಡಿದು ನಮಗೆ ಆಗಿರುವ ಅನ್ಯಾಯಕ್ಕೆ ಸರಿಯಾದ ನ್ಯಾಯ ಕೊಡಿಸಬೇಕೆಂದು ಎಂದು ಪಾಲಪ್ಪ ಹಾಗು ಗ್ರಾಮಸ್ಥರೆಲ್ಲರೂ ಪೊಲೀಸ್ ಸಿಬ್ಬಂದಿ ಮನವಿ ಮಾಡಿದ್ದಾರೆ .
