ವರದಿಗಾರರು :
ತೌಕೀರ್ ಖತೀಬ್ ||
ಸ್ಥಳ :
ಬೆಳಗಾವಿ
ವರದಿ ದಿನಾಂಕ :
14-11-2025
“ರಾಯಬಾಗಕ್ಕೆ ನೀರಾವರಿ ಉದಯ: ನವೆಂಬರ್ 24ರಿಂದ ಬಾವನಸೌಂದತ್ತಿ ಏತ ನೀರಾವರಿ ಯೋಜನೆಗೆ ಪ್ರಾಯೋಗಿಕ ಚಾಲನೆ”
ಚಿಕ್ಕೋಡಿ: ಬಾವನಸೌಂದತ್ತಿ ಗ್ರಾಮದಿಂದ ಕೃಷ್ಣಾ ನದಿಯ ನೀರನ್ನು ರಾಯಬಾಗ ತಾಲೂಕಿನ 39 ಕೆರೆಗಳಿಗೆ ತುಂಬಿಸುವ ಮಹತ್ವಾಕಾಂಕ್ಷಿ ಏತ ನೀರಾವರಿ ಯೋಜನೆ ನವೆಂಬರ್ 24 ರಂದು ಪ್ರಾಯೋಗಿಕ ಚಾಲನೆಗೆ ಸಿದ್ಧವಾಗುತ್ತಿದೆ. ಇಂದು ಸ್ಥಳಕ್ಕೆ ಭೇಟಿ ನೀಡಿದ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದೆಯಾದ ಕುಮಾರಿ ಪ್ರಿಯಾಂಕಾ ಜಾರಕಿಹೊಳಿ ಅವರು ಯೋಜನೆಯ ಪೂರ್ವಭಾವಿ ಕಾರ್ಯಗಳನ್ನು ಪರಿಶೀಲಿಸಿದರು.
ಯೋಜನೆ ನವೆಂಬರ್ 26ರಿಂದ ಸಂಪೂರ್ಣ ಕಾರ್ಯಗತಗೊಳ್ಳುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಿದ ಅವರು, ಯೋಜನೆಯ ಪ್ರಗತಿ, ನೀರಿನ ಸಾಗಣೆ ವ್ಯವಸ್ಥೆ, ಪಂಪ್‌ಹೌಸ್ ತಾಂತ್ರಿಕ ಸಿದ್ಧತೆ ಮತ್ತು ಕೆರೆಗಳಿಗೆ ನೀರು ಹರಿಸುವ ಮಾರ್ಗಗಳ ಬಗ್ಗೆ ವಿವರವಾಗಿ ಪರಿಶೀಲನೆ ನಡೆಸಿದರು.
ಯೋಜನೆ ಯಶಸ್ವಿಯಾಗಿ ಪೂರ್ಣಗೊಂಡ ಬಳಿಕ ರಾಯಬಾಗ ತಾಲೂಕಿನ ರೈತರಿಗೆ ಶಾಶ್ವತ ನೀರಾವರಿ ಲಭ್ಯವಾಗಲಿದ್ದು, ಈ ಪ್ರದೇಶದ ಕೃಷಿ ವಲಯದಲ್ಲಿ ಹೊಸ ಚೈತನ್ಯಕ್ಕೆ ದಾರಿ ತೆರೆಯಲಿದೆ. ಬರಗಾಲ ಸಮಸ್ಯೆ ತಗ್ಗಿ, ಉತ್ಪಾದಕತೆ ಹೆಚ್ಚಳ ಹಾಗೂ ಕೃಷಿ ಆಧಾರಿತ ಆರ್ಥಿಕ ಚಟುವಟಿಕೆಗಳ वृद्धಿಗೆ ಮಾರ್ಗದರ್ಶಕವಾಗಲಿದೆ ಎಂದು ಸಂಸದರು ವಿಶ್ವಾಸ ವ್ಯಕ್ತಪಡಿಸಿದರು.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
