ವರದಿಗಾರರು :
ಹುಲುಗಪ್ಪ ಎಂ ಹವಾಲ್ಧರ್ ||
ಸ್ಥಳ :
ವಿಜಯಪುರ
ವರದಿ ದಿನಾಂಕ :
06-09-2025
ತಾಳಿಕೋಟೆ ರೈತರಿಗೆ ಸಿಹಿ ಸುದ್ದಿ
ವಿಜಯಪುರ ಜಿಲ್ಲಾ ತಾಳಿಕೋಟೆ ತಾಲೂಕು ಇಂದು ಕಲಕೇರಿ ಕೆ ಇ ಬಿ ಅಲ್ಲಿ ರೈತರಿಗೆ ಹಗಲು ವೇಳೆ 7 ತಾಸು ವಿದ್ಯುತ್ ನೀಡುವ ಸಲುವಾಗಿ ಎರಡನೆ 5 MVA ಟ್ರಾನ್ಸಾಫ಼ಾರ್ಮನ್ನು ಉದ್ಘಾಟಿಸಲಾಯಿತು.
ಇದರ ಅಧ್ಯಕ್ಷತೆಯನ್ನು ಶ್ರೀಮತಿ ಸುನಂದಾ ಜಂಬಗಿ ಮೇಡಂ ಕಾರ್ಯ ನಿರ್ವಾಹಕ ಅಭಿಯಂತರರು ವಹಿಸಿಕೊಂಡಿದ್ದರು, ಶ್ರೀ ಪ್ರಭುಸಿಂಗ್ ಹಜಾರೆ ಅವರು ಚಾಲನೆ ನೀಡಿದರು . ಈ ಕಾರ್ಯಕ್ರಮದಲ್ಲಿ ಶ್ರೀ ಶಿವಪ್ಪ ಶರಣಪ್ಪ ಚಿತ್ತಾಪುರ ಶ್ರಿಮತಿ ಸುಜಾತ ಸಾಟೆ, ಅಮೃತಾ ಜಟ್ಟಿ ,ಶಂಕರಗೌಡ ಬಿರಾದಾರ ಸೇರಿ ಹಲವು ಅಧಿಕಾರಿಗಳು ಭಾಗಿ ಆಗಿದ್ದರು. ಈ ಕಾರ್ಯಕ್ರಮದ ನಿರೂಪಣೆ ಶಂಕರಗೌಡ ಪಾಟೀಲ್ . ಅಧಿಕಾರಿಗಳು ಸಿಬ್ಬಂದಿಗಳು ಪಾಲುಗೊಂಡಿದ್ದರು. ಕಲಕೇರಿ ಗ್ರಾಮದ ರೈತರು ಕೆ ಇ ಬಿ ಅಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಲಾಗಿದೆ.
