ವರದಿಗಾರರು :
ಚೇತನ್ ರಾಜ್ ಟಿ ಎಸ್, ||
ಸ್ಥಳ :
ಹುಣಸೂರು ರ್
ವರದಿ ದಿನಾಂಕ :
31-10-2025
ಹುಣಸೂರಿನ ಖ್ಯಾತ ವಕೀಲ ಕೆ.ರಾಜು ನದಿಯಲ್ಲಿ ಶವವಾಗಿ ಪತ್ತೆ
ಹುಣಸೂರು: ನಾಪತ್ತೆಯಾಗಿದ್ದ ಖ್ಯಾತ ವಕೀಲ ಕೆ.ರಾಜು (52) ಅವರು ಇಂದು ಹೊಸರಾಮನಹಳ್ಳಿಯ ಲಕ್ಷ್ಮಣ ತೀರ್ಥ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ನಿನ್ನೆ ಅವರು "ಆಫೀಸ್‌ಗೆ ಹೋಗುತ್ತೇನೆ" ಎಂದು ಮನೆಯಿಂದ ಹೊರಟಿದ್ದರು, ಆದರೆ ರಾತ್ರಿ ವಾಪಸ್ ಬಾರದ ಹಿನ್ನಲೆಯಲ್ಲಿ ಕುಟುಂಬಸ್ಥರು ಹುಡುಕಾಟ ಆರಂಭಿಸಿದ್ದರು.
ಹುಡುಕಾಟದ ವೇಳೆ ನದಿಯ ಬಳಿ ಅವರ ಕಾರು ಪತ್ತೆಯಾಗಿತ್ತು. ಬೆಳಗಿನಿಂದ ಅಗ್ನಿಶಾಮಕ ಸಿಬ್ಬಂದಿ ನದಿಯಲ್ಲಿ ಶೋಧ ಕಾರ್ಯ ನಡೆಸಿದ್ದು, ವಕೀಲ ಶವವಾಗಿ ಪತ್ತೆಯಾಗಿದ್ದಾರೆ. ಪ್ರಾಥಮಿಕವಾಗಿ, ಆತ್ಮಹತ್ಯೆ ಸಾಧ್ಯತೆ ವ್ಯಕ್ತವಾಗಿದೆ.
ಕೆ.ರಾಜು ಅವರ ಪತ್ನಿ ವಸಂತಲಕ್ಷ್ಮೀ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಸಂಬಂಧ ದುರೋ ದಾಖಲಿಸಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿಯಿಲ್ಲ. ಪ್ರಕರಣ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ತನಿಖೆ ಮುಂದುವರಿಯುತ್ತಿದೆ.
