ವರದಿಗಾರರು :
ಡಾ. ಜ್ಯೋತಿ ||
ಸ್ಥಳ :
ತುಮಕೂರು
ವರದಿ ದಿನಾಂಕ :
10-11-2025
ತಿಪಟೂರು: ಸಿಗ್ನಲ್ ನಿರ್ವಹಣೆ ವೈಫಲ್ಯದಿಂದ ವಾಹನ ಸಂಚಾರ ಅಸ್ತವ್ಯಸ್ತ
ತಿಪಟೂರು ನಗರದಲ್ಲಿ, ಲಕ್ಷಾಂತರ ರೂಪಾಯಿ ವೆಚ್ಚಮಾಡಿ ಅಳವಡಿಸಿರುವ ಸಂಚಾರ ಸಿಗ್ನಲ್‌ಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರಸಭೆ ಎದುರು, ಸಿಂಗೀ ನಂಜಪ್ಪ ವೃತ್ತ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ಶಿವಕುಮಾರ ಸ್ವಾಮೀಜಿ ವೃತ್ತಗಳ ಬಳಿ ಬೆಳಿಗ್ಗೆ ಮತ್ತು ಸಂಜೆ ವೇಳೆ ಸಿಗ್ನಲ್ ನಿಂತುಹೋಗುವ ಘಟನೆಗಳು ಹೆಚ್ಚಾಗಿವೆ.
ಸಾರ್ವಜನಿಕರು ಆರೋಪಿಸಿದ್ದಾರೆ: ಯಾವುದೇ ವೃತ್ತದಲ್ಲಿ ವಾಹನ ಸಂಚಾರ ನಿಯಂತ್ರಿಸಲು ಪೊಲೀಸ್ ಸಿಬ್ಬಂದಿ ನಿಯೋಜನೆ ಇಲ್ಲ. ಅವರು „ಟ್ರಾಫಿಕ್ ರೂಲ್ಸ್ ನಾವು ಪಾಲಿಸುತ್ತೇವೆ, ಆದರೆ ಸಿಗ್ನಲ್ ಕೆಲಸ ಮಾಡದಿದ್ದರೆ ಸಾರ್ವಜನಿಕರು ಹೇಗೆ ನಿಯಮ ಪಾಲಿಸಬೇಕು?“ ಎಂದು ಪ್ರಶ್ನಿಸಿದ್ದಾರೆ.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
