ವರದಿಗಾರರು :
ಶ್ರೀನಿವಾಸ್ ಹೆಚ್ ||
ಸ್ಥಳ :
ತುಮಕೂರು
ವರದಿ ದಿನಾಂಕ :
21-11-2025
ಬೀದರ್: ಕಬ್ಬಿನ ಬೆಲೆ ಏರಿಕೆ—ರೈತರ 8 ದಿನಗಳ ಧರಣಿಗೆ ತೆರೆ
ಕಬ್ಬಿನ ದರ ಹೆಚ್ಚಳಕ್ಕಾಗಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಸುಮಾರು ಎಂಟು ದಿನಗಳ ಕಾಲ ಮೈಕೊರೆಯುವ ಚಳಿಯಲ್ಲಿ ಧರಣಿ ನಡೆಸುತ್ತಿದ್ದ ರೈತರು, ಜಿಲ್ಲಾಡಳಿತದ ಹೊಸ ನಿರ್ಧಾರದ ನಂತರ ತಮ್ಮ ಪ್ರತಿಭಟನೆ ಹಿಂಪಡೆದುಕೊಂಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರ ನಿರ್ದೇಶನದಂತೆ ಪ್ರತಿ ಟನ್ ಕಬ್ಬಿಗೆ ₹2,950 ದರವನ್ನು ಜಿಲ್ಲಾಡಳಿತ ಗುರುವಾರ ಅಂತಿಮಗೊಳಿಸಿದೆ. ಇದಕ್ಕೆ ಮುಂಚೆ ನಿಗದಿಯಾಗಿದ್ದ ₹2,900 ದರವನ್ನು ರೈತರು ತೀವ್ರವಾಗಿ ವಿರೋಧಿಸುತ್ತಿದ್ದರು. ಹಗಲಿರುಳು ಧರಣಿ ನಡೆಸಿ, ಉರುಳು ಸೇವೆ ಮೂಲಕ ತಮ್ಮ ಆಕ್ರೋಶ ಹೊರಹಾಕುತ್ತಿದ್ದರು.
ಸ್ಥಳಕ್ಕೆ ಭೇಟಿ ನೀಡಿದ ಸಚಿವ ಖಂಡ್ರೆ ರೈತರ ಜೊತೆ ಮಾತುಕತೆ ನಡೆಸಿ ಪರಿಹಾರದ ದಾರಿಗೆ ಬೀಗಿದರು. ಹೊಸ ದರ ಘೋಷಣೆ ಬಳಿಕ ಧರಣಿ ಹಿಂಪಡೆಯುವುದಾಗಿ ರೈತರು ಘೋಷಿಸಿದರು. ರೈತ ಮುಖಂಡ ಮಲ್ಲಿಕಾರ್ಜುನ್ ಸ್ವಾಮಿ ಮಾತನಾಡಿ, “ಪ್ರತಿ ಟನ್‌ಗೆ ₹2,950 ದರ ನಿಗದಿ ಮಾಡಿದರೂ ನಮಗೆ ಪೂರ್ಣ ತೃಪ್ತಿ ಇಲ್ಲ. ನಾವು ಇನ್ನೂ ಹೆಚ್ಚುವ ದರವನ್ನು ಬೇಡಿದ್ದೇವೆ. ಆದರೆ ಕಬ್ಬಿನ ಬೀಜಕ್ಕಾಗಿ ಇತರ ಜಿಲ್ಲೆ-ರಾಜ್ಯಗಳ ಮೇಲೆ ಅವಲಂಬಿತರಾಗಿರುವ ಸಮಸ್ಯೆಯನ್ನು ಪರಿಹರಿಸಲು, ಇಲ್ಲಿ ಕಬ್ಬಿನ ಬೀಜ ಸಂಶೋಧನಾ ಕೇಂದ್ರ (ರೀಸರ್ಚ್ ಸೆಂಟರ್) ಸ್ಥಾಪನೆಗೆ ಭರವಸೆ ನೀಡಿರುವುದರಿಂದ ಪ್ರತಿಭಟನೆ ಹಿಂಪಡೆದಿದ್ದೇವೆ,” ಎಂದು ತಿಳಿಸಿದರು.
