ವರದಿಗಾರರು :
ನರೇಂದ್ರ ಬಾಬು ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
13-03-2025
ರಿನ್ ಡಾನ್ಸ್ ಡಿಜೆ ಕಾರ್ಯಕ್ರಮದ ಸ್ಥಳ ಬದಲಾಯಿಸಲು ಸೂಚಿಸಿದ ಪೊಲೀಸರು!!!
ಧಾರವಾಡ : ಅರವಿಂದ್ ಬೆಲ್ಲದ್ ಅಭಿಮಾನಿ ಬಳಗದ ವತಿಯಿಂದ ಹೋಳಿ ಹಬ್ಬದ ಅಂಗವಾಗಿ ಇದೇ ಮಾ: 15 ರಂದು ಧಾರವಾಡದ ಕೆಸಿಡಿ ವೃತ್ತದಲ್ಲಿ ರಿಂಗ್ ಡ್ಯಾನ್ಸ್ ಹಾಗೂ ಡಿಜೆ ಹಬ್ಬದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇದಕ್ಕೆ ಅಪೇಕ್ಷೆ ವ್ಯಕ್ತಪಡಿಸಿದ್ದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ನಾಗರಾಜ್ ಗೌರಿ ಅವರು, ಕೆಸಿಡಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಇಂಗ್ಲಿಷ್ ವಿಷಯದ ಪರೀಕ್ಷೆ ನಡೆಯುತ್ತಿರುವುದರಿಂದ ಕೆಸಿಡಿ ವೃತ್ತದಲ್ಲಿ ಡಿಜೆ ಹಾಗೂ ರಿಂಗ್ ಡ್ಯಾನ್ಸ್ ಗೆ ಅವಕಾಶಕೊಟ್ಟರೆ ವಿದ್ಯಾರ್ಥಿಗಳ ಪರೀಕ್ಷೆಗೆ ತೊಂದರೆಯಾಗುತ್ತದೆ ಹೀಗಾಗಿ ಕೆಸಿಡಿ ವೃತ್ತದಲ್ಲಿ ರೀನ್ ಡ್ಯಾನ್ಸ್ ಮತ್ತು ಡಿಜೆಗೆ ಅನುಮತಿ ನೀಡಬಾರದು ಎಂದು ಪೊಲೀಸ್ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಗೌರಿ ಅವರ ಮನವಿ ಪುರಸ್ಕರಿಸಿರುವ ಪೊಲೀಸ್ ಆಯುಕ್ತರು ಕೆಸಿಡಿ ವೃತ್ತದಲ್ಲಿ ನಡಿಬೇಕಿದ್ದ ರಿನ್ ಡಾನ್ಸ್ ಹಾಗೂ ಡಿಜೆ ಕಾರ್ಯಕ್ರಮಕ್ಕೆ ಅನುಮತಿ ನೀಡಲು ನಿರಾಕರಿಸಿದೆ. ಈ ಕಾರ್ಯಕ್ರಮವನ್ನು ಬೇರೆ ಸ್ಥಳದಲ್ಲಿ ನಡೆಸುವಂತೆ ಹಿಂಬರಹ ನೀಡಿದೆ. ಹೀಗಾಗಿ ಈ ಕಾರ್ಯಕ್ರಮವನ್ನು ಮಾ.15 ರಂದೇ ಧಾರವಾಡದ ಎಲ್ಐಸಿ ವೃತ್ತದಲ್ಲಿ ನಡೆಸಲು ಅರವಿಂದ್ ಬೆಲ್ಲದ ಅಭಿಮಾನಿ ಬಳಗದವರು ತೀರ್ಮಾನಿಸಿದ್ದಾರೆ
