ವರದಿಗಾರರು :
ಹೆಚ್ ಎಂ ಹವಾಲ್ದಾರ್ ||
ಸ್ಥಳ :
ಬಾಗಲಕೋಟೆ
ವರದಿ ದಿನಾಂಕ :
15-09-2025
ಬಾಗಲಕೋಟೆಯಲ್ಲಿ ಗಮನ ಸೆಳೆದ ಮ್ಯಾರಾಥಾನ್...ಜಿಲ್ಲಾಧಿಕಾರಿ ಸಂಗಪ್ಪ ಚಾಲನೆ.
ಮುಳುಗಡೆ ನಗರ ಬಾಗಲಕೋಟೆಯಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಾಗೂ ಅಭಿಯಂತರರ ದಿನಾಚರಣೆ ನಿಮಿತ್ಯ ಮ್ಯಾರಾಥಾನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನವನಗರದ ಕಾಳಿದಾಸ ವೃತ್ತದಿಂದ ಆರಂಭವಾದ ಮ್ಯಾರಾಥಾನ್ ಗೆ ಜಿಲ್ಲಾಧಿಕಾರಿ ಸಂಗಪ್ಪ ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಇನ್ನು ಮ್ಯಾರಾಥಾನ್ ಕಾಳಿದಾಸ ವೃತ್ತದಿಂದ ವಿದ್ಯಾಗಿರಿ ಸರ್ಕಲ್ ಮೂಲಕ ಹಾಯ್ದು ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದವರೆಗೆ ಸಂಚರಿಸಿತು. ಮ್ಯಾರಾಥಾನ್ ನಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ನೂರಾರು ಜನರು ಭಾಗವಹಿಸಿದರು.
