ವರದಿಗಾರರು :
ಸಿಂಚನ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
31-10-2025
ವೃದ್ಧಾಪದಲ್ಲಿ ಮಹಿಳೆಯರ ಚಪಲ :ವ್ಯಕ್ತಿ ಕಳೆದುಕೊಂಡಿದ್ದು ಲಕ್ಷ ಲಕ್ಷ ಹಣ
ಬೆಂಗಳೂರಿನಲ್ಲಿ ಆನ್ಲೈನ್ ಡೇಟಿಂಗ್ ಹೆಸರಿನಲ್ಲಿ 63 ವರ್ಷದ ವ್ಯಕ್ತಿ ಒಬ್ಬರು 32 ಲಕ್ಷ ರೂ ಗೂ ಅಧಿಕ ಹಣ ಕಳೆದುಕೊಂಡಿದ್ದಾರೆ. ಸೆಪ್ಟಂಬರ್ 5 ರಿಂದ ಅಕ್ಟೋಬರ್ 18ರ ಅವಧಿಯಲ್ಲಿ ನಡೆದ ಈ ವಂಚನೆಯಲ್ಲಿ ನೊಂದಣಿ ಶುಲ್ಕದ ನೆಪದಲ್ಲಿ ಹಣ ಪಡೆದು ಬಳಿಕ ಆಪ್ತತೆ ಬೆಳೆಸಿ ಬೇಟಿಗೆ ವ್ಯವಸ್ಥೆ ಮಾಡುವುದಾಗಿ ಹೇಳಿ ಲಕ್ಷಾಂತರ ರೂ ಗಳನ್ನು ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ. ಹಣ ನೀಡಲು ನಿರಾಕರಿಸಿದಾಗ ಕಾನೂನು ಕ್ರಮದ ಬೆದರಿಕೆಯನ್ನು ಹಾಕಲಾಗಿದೆ, ಅಂತಿಮವಾಗಿ ವಂಚನೆಗೆ ಒಳಗಾಗಿರುವುದಾಗಿ ಅರಿತ ವ್ಯಕ್ತಿ CEN ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
