ವರದಿಗಾರರು :
ತೌಕೀರ್ ಖತೀಬ್, ||
ಸ್ಥಳ :
ಬೆಳಗಾವಿ
ವರದಿ ದಿನಾಂಕ :
25-10-2025
ಬೆಳಗಾವಿ: ಕಬ್ಬು ದರ ನಿಗದಿಗೆ ರೈತರ ಆಕ್ರೋಶ – ಟ್ರಾಕ್ಟರ್‌ಗಳ ತಡೆ
ಬೆಳಗಾವಿ ಜಿಲ್ಲೆಯ ವಿವಿಧ ರೈತ ಸಂಘಟನೆಗಳು ಕಬ್ಬು ತುಂಬಿದ ಟ್ರಾಕ್ಟರ್‌ಗಳನ್ನು ತಡೆದು ವಾಪಸ್ ಕಳುಹಿಸುವ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿವೆ. ಕಬ್ಬಿನ ಸರಿಯಾದ ದರ ನಿಗದಿಯಾಗಬೇಕೆಂದು ಹಾಗೂ ಬಾಕಿ ಬಿಲ್‌ಗಳನ್ನು ತಕ್ಷಣ ಪಾವತಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. “ಈ ಬಾರಿ ರೈತರಿಗೆ ಮೋಸವಾಗಬಾರದು. ನಮ್ಮ ಬೆಲೆಗೆ ನ್ಯಾಯ ಸಿಗಬೇಕು,” ಎಂದು ರೈತ ನಾಯಕರು ಘೋಷಣೆ ಕೂಗಿದರು. ಈ ಪ್ರತಿಭಟನಾ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲೆಯ ಎಲ್ಲಾ ಪ್ರಮುಖ ರೈತ ಮುಖಂಡರು ಹಾಜರಿದ್ದು, ಏಕಮತದಿಂದ ಕಬ್ಬು ದರದ ಕುರಿತು ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
