ವರದಿಗಾರರು :
ಅಜಯ್ ಚೌಧರಿ ||
ಸ್ಥಳ :
ರಾಯಚೂರು.
ವರದಿ ದಿನಾಂಕ :
01-12-2025
ಕಾಡ್ಲೂರಿನಲ್ಲಿ ಶ್ರೀ ಹನುಮದ್ ವ್ರತ ಕಾರ್ಯಕ್ರಮ
ರಾಯಚೂರು, ನವೆಂಬರ್ 30: ಪ್ರತಿವರ್ಷದಂತೆ ಈ ವರ್ಷವೂ ಡಿಸೆಂಬರ್ 2, ಮಂಗಳವಾರ, ಕಾಡ್ಲೂರು ಗ್ರಾಮದ ಕೃಷ್ಣ ನದಿ ತೀರದಲ್ಲಿ ಶ್ರೀ ವನವಾಸಿ ರಾಮದೇವರ, ಶ್ರೀ ಉಪೇಂದ್ರತೀರ್ಥ ಕರಾರ್ಚಿತ ಶ್ರೀ ಮುಖ್ಯಪ್ರಾಣದೇವರ, ಮತ್ತು ಶ್ರೀ ಸ್ವಯಂಭೂ ರುದ್ರ ದೇವರ ಸನ್ನಿಧಾನದಲ್ಲಿ ಶ್ರೀ ಹನುಮದ್ ವ್ರತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ ಧ್ವಜಾರೋಹಣ, ನಿರ್ಮಾಲ್ಯ, ಪಂಚಾಮೃತ ಅಭಿಷೇಕ, ವಾಯುಸ್ತುತಿ ಪುನಶ್ಚರಣೆ ಮತ್ತು ರಾಯರ ಅಷ್ಟೋತ್ತರವನ್ನು ನೆರವೇರಿಸಿದ ಬಳಿಕ ಹನುಮದ್ ವ್ರತ ಪೂಜೆ ಮತ್ತು ಕಥೆ ನಡೆಯಲಿದೆ. ತದನಂತರ ಮಹಾಮಂಗಳಾರತಿ, ತೀರ್ಥಪ್ರಸಾದ ವಿತರಣೆ ನಡೆಯಲಿದೆ.
ಸಾಯಂಕಾಲದಲ್ಲಿ ಪಲ್ಲಕ್ಕಿ ಉತ್ಸವ, ಮಂಗಳಾರತಿ ಮತ್ತು ಕೃಷ್ಣಾರತಿ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಸ್ಥಳೀಯರು ಹಾಗೂ ಭಕ್ತರು ಧರ್ಮಪ್ರಿಯರಾಗಿ ಆಗಮಿಸಬೇಕು ಎಂದು ಕಾಡ್ಲೂರು ಸಂಸ್ಥಾನದ ರಂಗರಾವ್ ದೇಸಾಯಿ, ಜಯಕುಮಾರ್ ದೇಸಾಯಿ, ವಿಜಯಕುಮಾರ್ ದೇಸಾಯಿ ಹಾಗೂ ಗ್ರಾಮಸ್ಥರು ವಿನಂತಿಸುತ್ತಿದ್ದಾರೆ.
