ವರದಿಗಾರರು :
ಅಜಯ್ ||
ಸ್ಥಳ :
ರಾಯಚೂರು
ವರದಿ ದಿನಾಂಕ :
05-11-2025
ಜಾನುವಾರುಗಳಿಗೆ ಲಸಿಕೆ ಹಾಕಿಸಿ ಆರ್ಥಿಕ ನಷ್ಟ ತಪ್ಪಿಸಿ: ಶಿವಾನಂದ
ರಾಯಚೂರು, ನವೆಂಬರ್ 04: ಜಿಲ್ಲೆಯ ಪಶುಪಾಲಕರು ತಮ್ಮ ಎಲ್ಲಾ ದನ, ಎಮ್ಮೆ ಮತ್ತು 3 ತಿಂಗಳ ಮೇಲ್ಪಟ್ಟ ಕರುಗಳಿಗೆ ಲಸಿಕೆ ಹಾಕಿಸಿ ಸಾಂಕ್ರಾಮಿಕ ರೋಗದಿಂದಾಗುವ ಆರ್ಥಿಕ ನಷ್ಟ ತಪ್ಪಿಸಬೇಕು ಎಂದು ಉಪಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ತಿಳಿಸಿದ್ದಾರೆ. ನವೆಂಬರ್ 3ರಂದು ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದ 8ನೇ ಸುತ್ತಿನ ಕಾಲು–ಬಾಯಿ ರೋಗದ ಉಚಿತ ಸಾಮೂಹಿಕ ಲಸಿಕಾ ಅಭಿಯಾನದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕರು ಡಾ. ಪೋಮ್ ಸಿಂಗ್, ವಿ.ವೈ. ವಾಲ್ಮೀಕಿ ಮತ್ತು ಇತರ ಅಧಿಕಾರಿಗಳು ಭಾಗವಹಿಸಿದ್ದರು. ಪಶುಪಾಲನಾ ಇಲಾಖೆ ತಿಳಿಸಿದೆ, ಎಲ್ಲಾ ಹಳ್ಳಿಗಳಲ್ಲಿಯೂ ಪೋಲಿಯೋ ಲಸಿಕೆಯ ಮಾದರಿಯಲ್ಲಿ ಅಭಿಯಾನ ನಡೆಸಿ, ರೈತ–ಬಾಂಧವರಿಗೆ ಈ ಲಸಿಕೆ ಅಗತ್ಯವೆಂದು ತಿಳಿಸಬೇಕೆಂದು ತಿಳಿಸಿದ್ದಾರೆ.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಿಮ್ಮ ವಾಟ್ಸಾಪ್ ಗ್ರೂಪ್‌ಗೆ 7892441717 ಸಂಖ್ಯೆಯನ್ನು ಸೇರಿಸಿ
