ವರದಿಗಾರರು :
ಚೇತನ್ ರಾಜ್ ಟಿ ಎಸ್, ||
ಸ್ಥಳ :
ಹುಣಸೂರು
ವರದಿ ದಿನಾಂಕ :
28-11-2025
ಬಿಳಿಕೆರೆ ಮುಖ್ಯರಸ್ತೆಯಲ್ಲಿ ಗುಂಡಿ, ವಾಹನ ಸವಾರರು ಜೀವಭಯದ ನಡುವೆ ಸಂಚರಿಸುತ್ತಿದ್ದಾರೆ
ಹುಣಸೂರು: ಬಿಳಿಕೆರೆ ಗ್ರಾಮದ ಮುಖ್ಯರಸ್ತೆಯಿಂದ ಬಸ್ ನಿಲ್ದಾಣದತ್ತ ಹೋಗುವ ರಸ್ತೆಯಲ್ಲಿ ಗುಂಡಿ ಬಿದ್ದಿರುವುದು ವಾಹನ ಸಂಚಾರಕ್ಕೆ ಸವಾಲು ಮೂಡಿಸುತ್ತಿದ್ದು, ಸ್ಥಳೀಯರು ಮತ್ತು ಎಸ್ಎಂಎಸ್ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ ಹೀಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸತ್ಯಪ್ಪ ತಿಳಿಸಿದ್ದಾರೆ, ರಸ್ತೆಗಳಲ್ಲಿ ಸಂಭವಿಸುತ್ತಿರುವ ಅನಾಹುತಗಳನ್ನು ಮಾಧ್ಯಮದ ಮೂಲಕ ಗ್ರಾಮ ಪಂಚಾಯಿತಿಗೆ ಬಹಿರಂಗವಾಗಿ ತಿಳಿಸಿದ್ದರೂ, ನಿರ್ಲಕ್ಷ್ಯ ಮುಂದುವರಿದಿದೆ. “ದಿನಕ್ಕೆ 4–5 ಸಾವಿರ ವಾಹನಗಳು ಸಂಚರಿಸುತ್ತಿದ್ದು, 500ಕ್ಕೂ ಹೆಚ್ಚು ಸರ್ಕಾರಿ ಬಸ್ಸುಗಳು ಸಹ ಈ ರಸ್ತೆಯನ್ನು ಬಳಸುತ್ತಿವೆ. ತಾತ್ಕಾಲಿಕವಾಗಿ ಮಣ್ಣು ಹಾಕಿ ಮುಚ್ಚಿದ ಗುಂಡಿ ಸಂಚಾರದಿಂದ ಕೊಚ್ಚಿ ಹೋಗಿದೆ. ಇದರಿಂದ ವಾಹನ ಸವಾರರು ಜೀವನ ಭಯದೊಂದಿಗೆ ಸಂಚರಿಸುತ್ತಿದ್ದಾರೆ” ಎಂದು ಸತ್ಯಪ್ಪ ಹೇಳಿದರು.
ದ್ಯ, ಸ್ಥಳೀಯ ಯುವಕರ ತಂಡ ತಾತ್ಕಾಲಿಕವಾಗಿ ಜಲ್ಲಿ ಮತ್ತು ಗಾರೆ ಹಾಕಿ ರಸ್ತೆ ಸುಧಾರಣೆಗೆ ಪ್ರಯತ್ನಿಸಿದ್ದರೂ, ಸಂಚಾರದ ದಟ್ಟಣೆಯಿಂದ ಅದು ಕೂಡ ಹಾನಿಯಾಗಿದೆ. ಸತ್ಯಪ್ಪರವರು ಗ್ರಾಮ ಆಡಳಿತದ ನಿರ್ಲಕ್ಷ್ಯವನ್ನು ಖಂಡಿಸುತ್ತಾ, “ಪಂಚಾಯಿತಿಗಳಿಗೆ ಕೋಟ್ಯಾಂತರ ರೂ. ಅನುದಾನ ಬಂದರೂ ಮುಖ್ಯ ರಸ್ತೆಯಲ್ಲಿ ಇರುವ ಈ ದೊಡ್ಡ ಗುಂಡಿಗಳನ್ನು ನೋಡದೆ ನಿಜಕ್ಕೂ ನಿರ್ಲಕ್ಷ್ಯವಾಗಿದೆ. ಜಿಲ್ಲೆಯ ಸಚಿವರು, ಮಾಜಿ ಶಾಸಕರು ಸಹ ಈ ಮಾರ್ಗವನ್ನು ಬಳಸಿದರೂ ಗಮನ ಹರಿಸಿಲ್ಲ” ಎಂದು ಕಾಡಿದರು. ಅವರು ಎಚ್ಚರಿಕೆ ನೀಡಿದ್ದು, “ರಸ್ತೆಯನ್ನು ಕೂಡಲೇ ಶಾಶ್ವತವಾಗಿ ಸರಿಪಡಿಸಬೇಕು. ಇಲ್ಲದಿದ್ದರೆ, ರಸ್ತೆ ಮಧ್ಯದಲ್ಲಿ ಭತ್ತ ನಾಟಿ ನೆಡುವ ಮೂಲಕ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆಯಲಿದ್ದೇವೆ” ಎಂದರು.
