ವರದಿಗಾರರು :
ಹುಲಗಪ್ಪ ಎಮ್ ಹವಾಲ್ದಾರ ||
ಸ್ಥಳ :
ಯಾದಗಿರಿ
ವರದಿ ದಿನಾಂಕ :
19-09-2025
ಕೆಂಭಾವಿ ಪುರಸಭೆಯ ನಿರ್ಲಕ್ಷ್ಯ ದಿಂದ ರಸ್ತೆಯಲ್ಲಿ ನೀರು ನಿಂತು ಜನರ ಪರದಾಟ
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ ರೈತ ಸಂಪರ್ಕ ಕೇಂದ್ರ ಮತ್ತು ನೆಮ್ಮದಿ ಕೇಂದ್ರಕ್ಕೆ ಹೋಗುವ (ನಾಡಕಚೇರಿ ) ಹೋಗುವ ದಾರಿಯಲ್ಲಿ ನಿಂತ ನೀರಿನಿಂದ ತುಂಬಾ ತೊಂದರೆಯಾಗುತ್ತಿದೆ , ಮತ್ತು ಎಲ್ಲಾದಕ್ಕಿಂತ ಹೆಚ್ಚಿಂದು ಹೇಳಬೇಕೆಂದರೆ ಮಹಿಳೆಯರು ಮಕ್ಕಳು ವಯಸ್ಸಾದ ವೃದ್ಧರು ಓಡಾಡಲು ನೀರು ನಿಂತಿರುವುದರಿಂದ ನಡೆದುಕೊಂಡು ಹೋಗಲು ಅವರಿಗೆ ತುಂಬಾ ತೊಂದರೆ ಆಗುತ್ತಿದೆ ಮಹಿಳೆಯರು ಹೋಗೋದು ನೋಡಿದರೆ ನಾಚಿಕೆಡಿನ ಸಂಗತಿ ಆಗಿರುತ್ತದೆ, ಸುತ್ತಮುತ್ತಲಿನ ಹಳ್ಳಿಯ ಜನರು ಕೆಂಭಾವಿ ಪಟ್ಟಣದ ಜನರು ಇದನ್ನು ನೋಡಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಇಡಿ ಶಾಪ ಹಾಕುತ್ತಿದ್ದಾರೆ,
ಆದಕಾರಣ ಸಂಬಂಧಪಟ್ಟ ಅಧಿಕಾರಿಗಳು ಜನ ಪ್ರತಿ ನಿಧಿಗಳು ಕೂಡಲೇ ಇದರ ಬಗ್ಗೆ ಎಚ್ಚರವಹಿಸಬೇಕು ಎಂದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ .ಕೆಂಬಾವಿಪಟ್ಟಣದ ಜನರ ಪರವಾಗಿ ಮತ್ತು ಸುತ್ತಮುತ್ತಲಿನ ಹಳ್ಳಿಯ ಜನರ ಪರವಾಗಿ ನನ್ನ ಸಾರ್ವಜನಿಕ ಕಳಕಳಿ ಮನವಿ ಆಗಿರುತ್ತದೆ ಎಂದು ಮಾಧ್ಯಮದ ಮೂಲಕ ಕೇಳಿದ್ದರಾ
