ವರದಿಗಾರರು :
ಫಯಾಜ್ ತೇಲಿ ||
ಸ್ಥಳ :
ಬಾಗಲಕೋಟೆ
ವರದಿ ದಿನಾಂಕ :
19-09-2025
ಅತಿವೃಷ್ಟಿಯಿಂದ ಹಾನಿಯಾದ ಬೆಳೆಗಳಿಗೆ ಪರಿಹಾರ ನೀಡಲು ಆಗ್ರ
ಧಾರವಾಡ ಜಿಲ್ಲೆ ಅಣ್ಣಿಗೇರಿ ಪಟ್ಟಣದಲ್ಲಿ16ನೇ ದಿನ ನಿರಂತರ ರೈತರ ಧರಣಿ ಅತಿಯಾದ ಮಳೆಯಿಂದ ಬೆಳೆ ಸಂಪೂರ್ಣ ಹಾಳಾಗಿದ್ದು ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡ ರೈತರಿಗೆ ಕೂಡಲೇ ಪರಿಹಾರ ಕೊಡಬೇಕೆಂದು ಅಣ್ಣಿಗೇರಿ ಪಟ್ಟಣದಲ್ಲಿ ರೈತರಿಂದ ನಿರಂತರ ಹೋರಾಟ ನಡೆಯುತ್ತಿದ್ದು, ಪಕ್ಷಾತೀತ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಹೋರಾಟದಲ್ಲಿ ಕುಂದಗೋಳ ತಾಲೂಕಿನ ರತ್ನ ಭಾರತ ರೈತ ಸಮಾಜದ ತಾಲೂಕ ಅಧ್ಯಕ್ಷ ಬಸವರಾಜ ಯೋಗಪ್ಪನವರ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
ರೈತರಿಗೆ ಸರ್ಕಾರ ಕೂಡಲೇ ಪ್ರತಿ ಎಕರೆಗೆ 50,000 ಬೆಳೆ ಹಾನಿ ನೀಡಬೇಕು ರೈತರ ಬೆಳೆ ವಿಮೆ ಶೀಘ್ರ ಬಿಡುಗಡೆ ಮಾಡಬೇಕು, ಸರ್ಕಾರವು ಬೆಳೆ ವಿಮೆ ಬೆಳೆ ಹಾನಿ ಕೊಡುವುದಾಗಿ ಬರೀ ಚರ್ಚೆಯಲ್ಲಿ ಕಾಲಹರಣ ಮಾಡುತ್ತಿದೆ ಎಂದು ಅವರು ರಾಜ್ಯ ಹಾಗೂ ಕೇಂದ್ರ ಸರ್ಕಾರಕೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಭಗವಂತ ಪುಟ್ಟಣ್ಣವರ ಮಾತನಾಡಿ 16ನೇ ದಿನ ನಿರಂತರ ಧರಣಿ ಸತ್ಯಾಗ್ರಹ ಮಾಡಿದರು ಯಾವ ಒಬ್ಬ ಅಧಿಕಾರಿಗಳು ಸ್ಥಳಕ್ಕೆ ಬರುತ್ತಿಲ್ಲ, ಕೂಡಲೇ ಜಿಲ್ಲಾಧಿಕಾರಿಗಳು ಆಗಮಿಸಿ ನಮ್ಮ ಅವಾಲು ಸ್ವೀಕರಿಸಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಹೇಳಿದ ಈ ಸಂದರ್ಭದಲ್ಲಿ ಜಯರಾಮ್ ಹೂಗಾರ ಗುರುಸಿದ್ದಪ್ಪ ಕೊಪ್ಪದ ನಿಂಗಪ್ಪ ಬೇಡಪ್ಪನವರ ರಾಜು ಮುಡನಿ ಗಂಗಾಧರ ಪತ್ತಾರ ಈರಪ್ಪ ನವಲಗುಂದ ಮತ್ತು ಸಾಬ್ ಕಡ್ಡಣ್ಣವರ ನಾಗರಾಜ ಬೆಟಿಗೇರಿ ಸೋಮರಾಯಪ್ಪ ಮಲ್ಲಿಗವಾಡ ಸೇರಿದಂತೆ ಅನೇಕ ರೈತ ಮುಖಂಡರು ಪಟ್ಟಣದ ರೈತ ಹೋರಾಟಗಾರರು ಇದ್ದರು
