ವರದಿಗಾರರು :
ನಜ್ರುಲ್ಲಾ ಬೇಗ್ , ||
ಸ್ಥಳ :
ತುಮಕೂರು
ವರದಿ ದಿನಾಂಕ :
25-09-2025
ಮಧುಗಿರಿ ತಾಲ್ಲೂಕಿನಲ್ಲಿ ಯೂರಿಯಾ ಗೊಬ್ಬರಕ್ಕಾಗಿ ರೈತರ ಹಾಹಾಕಾರ
ಮಧುಗಿರಿ: ಪಟ್ಟಣದ ಗೊಬ್ಬರ ಅಂಗಡಿ ಮುಂಭಾಗ ಮಂಗಳವಾರ ತಾಲ್ಲೂಕಿನ ರೈತರು ಮುಗಿಬಿದ್ದು ಯೂರಿಯಾ ಖರೀದಿಸಿದರು. ಪಟ್ಟಣದ ಅಂಗಡಿಗಳಿಗೆ ಯೂರಿಯಾ ಪೂರೈಕೆ ಆಗಿರುವ ವಿಷಯ ತಿಳಿದ ಕೂಡಲೇ ರೈತರು ತಮ್ಮ ಆಧಾರ್ ಕಾರ್ಡುಗಳನ್ನು ಹಿಡಿದು ದೀರ್ಘ ಸಾಲಿನಲ್ಲಿ ನಿಂತು ಗೊಬ್ಬರ ಪಡೆಯಲು ಮುಂದಾದರು.
ಮಳೆಗಾಲ ಆರಂಭವಾದ ಹಿನ್ನೆಲೆಯಲ್ಲಿ ಯೂರಿಯಾ ಗೊಬ್ಬರದ ಬೇಡಿಕೆ ಹೆಚ್ಚಾಗಿದೆ. ಆದರೆ ಬೇಕಾದಷ್ಟು ಗೊಬ್ಬರ ದೊರೆಯದ ಕಾರಣ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. “ರೈತರಿಗೆ ಬೇಕಾದಷ್ಟು ಗೊಬ್ಬರ ನೀಡಬೇಕು. ಇಲ್ಲವಾದರೆ ಬೆಳೆ ಬೆಳೆಸಲು ತೊಂದರೆ ಆಗುತ್ತದೆ” ಎಂದು ರೈತ ಕೃಷ್ಣಪ್ಪ ಆಗ್ರಹಿಸಿದರು.
“ಬೀಜ ಮತ್ತು ಗೊಬ್ಬರಕ್ಕೆ ಹೆಚ್ಚಿನ ಬೇಡಿಕೆಯಿದ್ದರೂ ಸರ್ಕಾರ ಸರಿಯಾಗಿ ಪೂರೈಸುತ್ತಿಲ್ಲ. ಈ ನಿರ್ಲಕ್ಷ್ಯದಿಂದಲೇ ನಾವು ತೊಂದರೆ ಅನುಭವಿಸುತ್ತಿದ್ದೇವೆ. ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು” ಎಂದು ರೈತ ರಂಗನಾಥಪ್ಪ ಬೇಡಿಕೊಂಡರು.
ರೈತರ ಬೇಡಿಕೆಗಳಿಗೆ ಸರ್ಕಾರದಿಂದ ಶೀಘ್ರ ಸ್ಪಂದನೆ ಸಿಗುವ ನಿರೀಕ್ಷೆ.
