ವರದಿಗಾರರು :
ಈ ಮಂಜುನಾಥ ||
ಸ್ಥಳ :
ವಿಜಯನಗರ
ವರದಿ ದಿನಾಂಕ :
09-11-2025
ಮರಿಯಮ್ಮನಹಳ್ಳಿ–ಲೋಕಪ್ಪನಹೊಲ ಮಾರ್ಗದಲ್ಲಿ ಸಂಚಾರ ಸುಗಮ — ವಿದ್ಯಾರ್ಥಿಗಳು, ರೈತರಿಗೆ ನೆಮ್ಮದಿ
ಮರಿಯಮ್ಮನಹಳ್ಳಿ ಕಬುರ್ ಸ್ತಾನದಿಂದ ಹೊಸ ಅಯ್ಯನಹಳ್ಳಿ, ಹಳೆ ಅಯ್ಯನಹಳ್ಳಿ ಹಾಗೂ ಹಗರಿಬೊಮ್ಮನಹಳ್ಳಿ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಇಂದಿರಾಗಾಂಧಿ ನಗರದಿಂದ ಲೋಕಪ್ಪನಹೊಳ ಗ್ರಾಮವರೆಗೆ ತೆರಳುವ ರಸ್ತೆ ಕಳೆದ ಕೆಲವು ತಿಂಗಳುಗಳಿಂದ ತುಂಬಾ ಅದಗೆಟ್ಟು ವಾಹನ ಸಂಚಾರಕ್ಕೂ ತೊಂದರೆ ಉಂಟಾಗಿತ್ತು.
ಈ ರಸ್ತೆಯಲ್ಲಿ ಮೂರು-ನಾಲ್ಕು ವಿದ್ಯಾಸಂಸ್ಥೆಗಳಿದ್ದು, ಪ್ರತಿದಿನ ನೂರಾರು ವಿದ್ಯಾರ್ಥಿಗಳು ಈ ಮಾರ್ಗದಿಂದ ಸಂಚರಿಸುತ್ತಿದ್ದರು. ಅಲ್ಲದೆ ರೈತರು ಹಾಗೂ ಸ್ಥಳೀಯ ಗ್ರಾಮಸ್ಥರಿಗೂ ಈ ಮಾರ್ಗ ಪ್ರಮುಖ ಸಂಪರ್ಕ ರಸ್ತೆ ಆಗಿತ್ತು.
ಸಂಚಾರ ಕಷ್ಟಗಳ ಹಿನ್ನೆಲೆಯಲ್ಲಿ ಸ್ಥಳೀಯ ಮೂರು ಗ್ರಾಮಗಳ ಗ್ರಾಮಪಂಚಾಯಿತಿ ಸದಸ್ಯರುಗಳು ಎಸ್‌ಎಲ್‌ಆರ್ ಮೆಟಾಲಿಕ್ಸ್ ಕಂಪನಿಯ ಅಧಿಕಾರಿಗಳನ್ನು ಸಂಪರ್ಕಿಸಿ ರಸ್ತೆ ನವೀಕರಣಕ್ಕೆ ಮನವಿ ಸಲ್ಲಿಸಿದರು.
ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಎಸ್‌ಎಲ್‌ಆರ್ ಮೆಟಾಲಿಕ್ಸ್ ಕಂಪನಿ, ತನ್ನ ಸಿ.ಎಸ್.ಆರ್ (ಸಾಮಾಜಿಕ ಹೊಣೆಗಾರಿಕೆ) ಯೋಜನೆ ಅಡಿಯಲ್ಲಿ ಈ ರಸ್ತೆಯನ್ನು ಶುದ್ಧೀಕರಿಸಿ, ನವೀಕರಿಸುವ ಕಾರ್ಯ ಕೈಗೊಂಡಿದೆ.
ಕಂಪನಿಯ ಸಿ.ಎಸ್.ಆರ್ ಯೋಜನೆ ಅಧಿಕಾರಿ ಮಲ್ಲಿಕಾರ್ಜುನ ರವರು, “ಗ್ರಾಮಸ್ಥರ ಬೇಡಿಕೆಯ ಮೇರೆಗೆ ರಸ್ತೆ ನವೀಕರಣವನ್ನು ಪೂರ್ಣಗೊಳಿಸಲಾಗಿದೆ. ಈ ಕಾರ್ಯದಿಂದ ಸ್ಥಳೀಯರಿಗೆ ಸುಗಮ ಸಂಚಾರ ಸಾಧ್ಯವಾಗಿದೆ,” ಎಂದು ತಿಳಿಸಿದ್ದಾರೆ.
ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ಕಾಗಿ ಕಂಪನಿಯ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
