ವರದಿಗಾರರು :
ಕೋಡನಹಳ್ಳಿ ಶಂಕರ್ ||
ಸ್ಥಳ :
ಬೇಲೂರು
ವರದಿ ದಿನಾಂಕ :
07-11-2025
ಬೇಲೂರಿನಲ್ಲಿ ರಸ್ತೆ ತಡೆ – ಬಸ್ ಸಂಚಾರ ಸ್ಥಗಿತಕ್ಕೆ ಸಾರ್ವಜನಿಕರ ಆಕ್ರೋಶ
ಬೇಲೂರು, ನವೆಂಬರ್ 6: ಬೇಲೂರಿನಲ್ಲಿರುವ ಡಿಪೋದಲ್ಲೇ ಬಸ್ ಇದ್ದರೂ ಹಳೇಬೀಡು–ಜಾವಗಲ್–ಬಾಣವರ–ಅರಸೀಕೆರೆ ಮಾರ್ಗಕ್ಕೆ ಮಧ್ಯಾಹ್ನ 3.00 ಗಂಟೆಯಿಂದ ಸಂಜೆವರೆಗೆ ಬಸ್ ಸಂಚಾರ ನಡೆದಿಲ್ಲ. ಇದರ ಪರಿಣಾಮವಾಗಿ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ಹಲವು ಗಂಟೆಗಳ ಕಾಲ ರಸ್ತೆ ಬದಿಯಲ್ಲಿ ನಿರಾಶ್ರಿತರಾಗಿ ನಿಂತಿದ್ದರು.
ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿ ರಸ್ತೆ ತಡೆ ನಡೆಸಿದರು. ಬಸ್ ಸಂಚಾರ ವ್ಯವಸ್ಥೆಯಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು. ಸಂಜೆ ವೇಳೆಗೆ ಸಂಚಾರ ಪುನಃ ಪ್ರಾರಂಭವಾಯಿತು.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
