ವರದಿಗಾರರು :
ಶ್ರೀನಿವಾಸ್ ಹೆಚ್ ||
ಸ್ಥಳ :
ತುಮಕೂರು
ವರದಿ ದಿನಾಂಕ :
29-11-2025
ಚಿಕ್ಕನಾಯಕನಹಳ್ಳಿಯಲ್ಲಿ ಮಿಶ್ರತಳಿ ಹಸುಗಳ ಹಾಲು ಕರೆಯುವ ಸ್ಪರ್ಧೆ
ಚಿಕ್ಕನಾಯಕನಹಳ್ಳಿ: ಹುಳಿಯಾರು: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಚಿಕ್ಕನಾಯಕನಹಳ್ಳಿಯವರ ಸಹಯೋಗದಲ್ಲಿ, ಚಿಕ್ಕನಾಯಕನಹಳ್ಳಿಯ ಹಂದನಕೆರೆ ಹೋಬಳಿಗೆ ಸೇರಿದ ಸಬ್ಬೇನಹಳ್ಳಿ, ಹರೇನಹಳ್ಳಿ ಮತ್ತು ಚೌಳಕಟ್ಟೆ ಗ್ರಾಮಗಳಲ್ಲಿ ಮಿಶ್ರತಳಿ ಹಸುಗಳ ಹಾಲು ಕರೆಯುವ ಸ್ಪರ್ಧೆ ಡಿಸೆಂಬರ್ 1 ಮತ್ತು 2 ರಂದು ಆಯೋಜಿಸಲಾಗಿದೆ.
ಸ್ಪರ್ಧಾ ವೇಳಾಪಟ್ಟಿ: ಡಿಸೆಂಬರ್ 1: ಸಂಜೆ 5 ರಿಂದ 6 ಗಂಟೆ – ಸಬ್ಬೇನಹಳ್ಳಿ, ಹರೇನಹಳ್ಳಿ, ಚೌಳಕಟ್ಟೆ ಡಿಸೆಂಬರ್ 2: ಬೆಳಗ್ಗೆ 6 ರಿಂದ 7 ಗಂಟೆ – ಸಬ್ಬೇನಹಳ್ಳಿ, ಹರೇನಹಳ್ಳಿ, ಚೌಳಕಟ್ಟೆ ಪ್ರಶಸ್ತಿ: ಪ್ರಥಮ ಬಹುಮಾನ: ₹11,000 + ಪ್ರಶಸ್ತಿ ಪತ್ರ + ಟ್ರೋಫಿ ದ್ವಿತೀಯ ಬಹುಮಾನ: ₹8,500 + ಪ್ರಶಸ್ತಿ ಪತ್ರ + ಟ್ರೋಫಿ ತೃತೀಯ ಬಹುಮಾನ: ₹6,500 + ಪ್ರಶಸ್ತಿ ಪತ್ರ + ಟ್ರೋಫಿ ಭಾಗವಹಿಸುವವರು: ಆಸಕ್ತ ಹಾಲು ಉತ್ಪಾದಕರು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಈ ಕಾರ್ಯಕ್ರಮದ ಮೂಲಕ ಹಾಲು ಉತ್ಪಾದಕರಿಗೆ ತಮ್ಮ ಹಸುಗಳ ಕೌಶಲ್ಯವನ್ನು ಪ್ರದರ್ಶಿಸಲು ಮತ್ತು ಉತ್ತಮ ಉತ್ಪಾದನೆಗೆ ಪ್ರೋತ್ಸಾಹ ನೀಡಲು ಅವಕಾಶ ದೊರೆಯಲಿದೆ.
