ವರದಿಗಾರರು :
ಇಮಾಮಸಾಬ ಹಣಬರಕಡಬಿ ||
ಸ್ಥಳ :
ಸವದತ್ತಿ
ವರದಿ ದಿನಾಂಕ :
26-11-2025
ಸವದತ್ತಿಯಲ್ಲಿ 2 ಕೋಟಿ ರೂ. ವೆಚ್ಚದ ಕೃಷಿ ನೀರಾವರಿ ಕಾಮಗಾರಿ ಭೂಮಿ ಪೂಜೆ
ಸವದತ್ತಿ: ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಇಂದು ಕೃಷಿ ಇಲಾಖೆಯು ಮಹತ್ವದ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿತು. ಈ ಸಂದರ್ಭ ಸ್ಥಳೀಯ ಶಾಸಕರಾದ ವಿಶ್ವಾಶ್ ಅಣ್ಣ ವೈದ್ಯ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೆಂದರೆ: ಬೆಳಗಾವಿ ಜಂಟಿ ಕೃಷಿ ನಿರ್ದೇಶಕರು ಮತ್ತು ಸವದತ್ತಿ ಸಹಾಯಕ ಕೃಷಿ ನಿರ್ದೇಶಕರ ನೇತೃತ್ವದಲ್ಲಿ, 2025-26ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ, ಸವದತ್ತಿ ಬೀಜೋತ್ಪಾದನಾ ಕೇಂದ್ರಕ್ಕೆ ನೀರಾವರಿ ಸೌಲಭ್ಯ ಒದಗಿಸಲು ಭೂಮಿ ಪೂಜೆ ನಡೆಯಿತು.
ಈ ಯೋಜನೆಯ ಅಂದಾಜು ವೆಚ್ಚ 2 ಕೋಟಿ ರೂ., ಇದು ಬೀಜೋತ್ಪಾದನಾ ಕೇಂದ್ರದ ಅಭಿವೃದ್ಧಿಗೆ ದೊಡ್ಡ ಬೆಂಬಲ ನೀಡಲಿದೆ. ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಗಣ್ಯ ಮಾನ್ಯರು, ಸ್ಥಳೀಯ ಮುಖಂಡರು ಮತ್ತು ಯುವ ಮಿತ್ರರು ಪಾಲ್ಗೊಂಡಿದ್ದರು.
