ವರದಿಗಾರರು :
ಹುಲಗಪ್ಪ ಎಮ್ ಹವಾಲ್ದಾರ ||
ಸ್ಥಳ :
ರಾಯಚೂರು
ವರದಿ ದಿನಾಂಕ :
23-05-2025
ಹಿರಿಯ ರೈತ ಹೋರಾಟಗಾರಾದ ಚಾಮರಸ ಮಾಲಿ ಪಾಟೀಲ ಕ್ಷಮೆಯಾಚಿಸಬೇಕು ರಾಜಶೇಖರ ಮರ್ಚಲ್ ಆಗ್ರಹ
ರಾಯಚೂರು ಜಿಲ್ಲೆಯ ಮಾನ್ವಿ ಮತ್ತು ಸಿಂಧನೂರು ನಗರದಲ್ಲಿ ನಿನ್ನೆ ಅಂದರೆ ದಿನಾಂಕ 22-05-2025 ರಂದು ಜೋಳ ಖರೀದಿಗೆ ಸಂಬಂಧಿಸಿದಂತೆ ರೈತ ಸಂಘದಿಂದ ಹೋರಾಟವನ್ನು ಮಾಡುತ್ತಿದ್ದರು
ಈ ರೈತರ ಹೋರಾಟಕ್ಕೆ ನಮ್ಮ ಬೆಂಬಲವಿದೆ ನಾವು ರೈತ ಕುಟುಂಬದಿಂದ ಬಂದವರು. ಹೋರಾಟಗಾರರು ಸಿಂಧನೂರಿನಲ್ಲಿ ಹೋರಾಟವನ್ನು ಮಾಡಿ ಅಲ್ಲಿನ ತಹಶಿಲ್ದಾರರಿಗೆ ಮನವಿಯನ್ನು ಕೊಟ್ಟಿದ್ದಾರೆ. ಆದರೆ ಮಾನ್ವಿ ಪಟ್ಟಣದಲ್ಲಿ ಹೋರಾಟದ ಸ್ಥಳಕ್ಕೆ ಜಿಲ್ಲಾಡಳಿತದ ಪ್ರತಿನಿಧಿಯಾಗಿ ಮನವಿ ಪತ್ರವನ್ನು ಸ್ವೀಕರಿಸಲು ಹೋದಂತೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರು ಹಾಗೂ ರಾಯಚೂರು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಕೃಷ್ಣಾ ಶಾವಂತಗೇರಾ ಇವರನ್ನು ಹಿರಿಯ ರೈತ ಹೋರಾಟಗಾರರಾದ ಚಾಮರಸ ಮಾಲಿ ಪಾಟೀಲರು ಕೈಯಿಂದ ಬಲವಾಗಿ ತಳ್ಳಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಅಸಂಬದ್ಧ ಪದಗಳಿಂದ ಸಾರ್ವಜನಿಕವಾಗಿ ಬೈದಿದ್ದು ಅತ್ಯಂತ ಖಂಡನೀಯ,
ಇದು ನೌಕರ ವರ್ಗಕ್ಕೆ ಹಾಗೂ ಅವರ ಸ್ಥಾನಕ್ಕೆ ಮಾಡಿದ ಅವಮಾನವಾಗಿದೆ ಮತ್ತು ಹೋರಾಟಗಾರರಿಗೆ ವಿಶೇಷವಾಗಿ ಅವರ ಹಿರಿತನಕ್ಕೆ ಇದು ಶೊಭೆ ತರುವಂತಹದ್ದಲ್ಲ. ಯಾರೇ ಮನವಿ ಸ್ವೀಕರಿಸಲು, ಸಮಸ್ಯೆ ಆಲಿಸಲು ಬರುವತಂಹ ಅಧಿಕಾರಿಗಳೊಂದಿಗೆ ಗೌರವಯುತವಾಗಿ ನಡೆದುಕೊಳ್ಳಬೇಕಾದುದ್ದು ಹೋರಾಟಗಾರರ ಕರ್ತವ್ಯ ತಮ್ಮ ಹಕ್ಕನ್ನು ಕೇಳುವ ರೀತಿಯಲ್ಲಿ ಕೇಳಲಿ, ಪ್ರಶ್ನೆ ಮಾಡುವುದಕ್ಕೆ ನಮ್ಮ ಸಂವಿಧಾನ ಮತ್ತು ಕಾನೂನು ಅವಕಾಶವನ್ನು ಮಾಡಿ ಕೊಟ್ಟಿದೆ ಆದರೆ ಅದು ಆ ಚೌಕಟ್ಟನ್ನು ಮೀರಬಾರದು.
ಜೋಳ ಖರೀದಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿಲ್ಲಿಸಿವೆ ಇದು ಸರ್ಕಾರದ ನೀತಿ ವಿಚಾರ ಇದರಲ್ಲಿ ಜಿಲ್ಲಾಧಿಕಾರಿ ಅಥಾವ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತೀರ್ಮಾನವನ್ನು ತೆಗೆದುಕೊಳ್ಳುವ ಅಧಿಕಾರ ಇರುವುದಿಲ್ಲ ಅವರು ಸಮಸ್ಯೆಯನ್ನು ಕುರಿತಂತೆ ಕೇವಲ ಸರ್ಕಾರದ ಗಮನಕ್ಕೆ ತಂದು ಖರೀದಿ ಆದೇಶಕ್ಕೆ ಒತ್ತಾಯ ಮಾಡಬಹುದಷ್ಟೆ ವಾಸ್ತವವನ್ನು ಅರಿತುಕೊಳ್ಳದೆ ಈ ರೀತಿಯಲ್ಲಿ ನಡೆದುಕೊಳ್ಳುವುದು ಸರಿಯಾದ ನಡೆಯಲ್ಲ ಜೊತೆಗೆ ಇದನ್ನು ಪ್ರಜ್ಞಾವಂತ ನಾಗರಿಕ ಸಮಾಜ ಒಪ್ಪುವುದಿಲ್ಲ ಆದ್ದರಿಂದ ಅವರು ಕ್ಷಮೆಯಾಚಿಸಬೇಕು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು. ಎಂದು ಆಕ್ರೋಶ ವ್ಯಕ್ತಪಡಿಸಿದರು
ಮತ್ತು ಜೋಳ ಖರೀದಿ ಮತ್ತು ರೈತರ ಇತರೆ ಸಮಸ್ಯೆಗಳನ್ನು ಕುರಿತು ಸರ್ಕಾರ ಮತ್ತು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಿ ಆಗತ್ಯ ಕ್ರಮ ವಹಿಸಬೇಕೆಂದು . ಅಖಂಡ ಕರ್ನಾಟಕ ರಕ್ಷಣಾ ಸಮಿತಿರಾಜ್ಯಾಧ್ಯಕ್ಷರು ರಾಜಶೇಖರ ಮಾಚರ್ಲಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
