ವರದಿಗಾರರು :
ಹುಲಗಪ್ಪ ಎಮ್ ಹವಾಲ್ದಾರ ||
ಸ್ಥಳ :
ಚಿತ್ರದುರ್ಗ
ವರದಿ ದಿನಾಂಕ :
20-06-2025
ರೈತರ ಖಾತೆಗೆ ಸರ್ಕಾರದಿಂದ ಬರುವಂತ ಹಣ ವಿಧವಾ ವೇತನ ಅಂಗವಿಕಲರ ವೇತನ ಸರ್ಕಾರದಿಂದ ಗ್ಯಾರಂಟಿ ಯೋಜನೆಗಳಿಂದ ಬಂದ�
ಚಿತ್ರದುರ್ಗ ಜಿಲ್ಲೆ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಡಾಕ್ಟರ್ ವಾಸುದೇವ ಮೇಟಿ ಬಣ್ಣದ ವತಿಯಿಂದ. ಚಿತ್ರದುರ್ಗ ತಾಲೂಕಿನ ಎಲ್ಲಾ ತಾಲೂಕು ಅಧಿಕಾರಿಗಳನ್ನು ಮಾನ್ಯ ಉಪ ವಿಭಾಗೀಯ ಅಧಿಕಾರಿಗಳು. ತಾಲೂಕು ಮಟ್ಟದ ಎಲ್ಲಾ ಇಲಾಖೆ ಅಧಿಕಾರಿಗಳನ್ನು ಸಭೆ ಕರೆದಿದ್ದು ಸಭೆಯಲ್ಲಿ ಎಲ್ಲಾ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದು
ಈ ಸಭೆಯಲ್ಲಿ ಕೃಷಿಗೆ ಸಂಬಂಧಪಟ್ಟಂತೆ ಬಿತ್ತನೆ ಬೀಜ ಕಳಪೆಯಾಗಿರುವುದು ಮತ್ತು ಮೆಕ್ಕೆಜೋಳ ಬೀಜ ಕಳಪೆ ಆಗಿರುವುದು ಈರುಳ್ಳಿ ಬೀಜ ಕಳಪೆಯಾಗಿರುವುದು ಮತ್ತು ರಸಗೊಬ್ಬರ ಕೊರತೆ ಚರ್ಚೆ ಮಾಡಲಾಯಿತು
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಬ್ಯಾಂಕುಗಳಿಂದ ರೈತರಿಗೆ ನೋಟಿಸ್ ನೀಡುತ್ತಿರುವುದನ್ನು ಮತ್ತು ಬ್ಯಾಂಕಗಳಲ್ಲಿ ರೈತರ ಖಾತೆಗೆ ಸರ್ಕಾರದಿಂದ ಬರುವಂತ ಹಣ ವಿಧವಾ ವೇತನ ಅಂಗವಿಕಲರ ವೇತನ ಸರ್ಕಾರದಿಂದ ಗ್ಯಾರಂಟಿ ಯೋಜನೆಗಳಿಂದ ಬಂದಿರುವಂತ ಹಣವನ್ನು ಯಾವುದೇ ಕಾರಣಕ್ಕೂ ಬ್ಯಾಂಕ್ ಸಿಬ್ಬಂದಿಯವರು ಜಮಾ ಮಾಡುವಂತಿಲ್ಲ ಎಂದು ಚರ್ಚೆ ಮಾಡಲಾಯಿತು
ಹಾಗೆ ಕೆಇಬಿ ಅಧಿಕಾರಿಗಳು ಭಾಗ್ಯಜ್ಯೋತಿ ಕುಟಿರ ಜ್ಯೋತಿ ವಿದ್ಯುತ್ ಸಂಪರ್ಕ ಪಡೆದಿರುವಂತ ರೈತರಿಗೆ ಕೆಇಬಿಅಧಿಕಾರಿಗಳು ವಿದ್ಯುತ್ತನ್ನು ಡಿಸ್ ಕನೆಕ್ಟ್ ಮಾಡದಂತೆ ಸೂಚಿಸಲಾಯಿತು ಇನ್ನೂ ಅನೇಕ ಇಲಾಖೆಗಳ ಸಮಸ್ಯೆಗಳನ್ನು ಚರ್ಚೆ ಮಾಡಲಾಯಿತು ಈ
ಸಂದರ್ಭದಲ್ಲಿ ಜಿಲ್ಲಾ ಉಪ ವಿಭಾಗೀಯ ಅಧಿಕಾರಿಗಳು ತಾಸಿಲ್ದಾರಗಳು ತಾಲೂಕು ಎಲ್ಲಾ ಇಲಾಖೆ.ಅಧಿಕಾರಿಗಳು ಮತ್ತು ಚಿತ್ರದುರ್ಗ ಜಿಲ್ಲಾಧ್ಯಕ್ಷರಾದ ಲಕ್ಷ್ಮೀಕಾಂತ್ ಈ ಎನ್ ಲಿಂಗಾವರ ಹಟ್ಟಿ ಶ್ರೀಧರ್ ರೆಡ್ಡಿ ಡಗ್ಗಲ್ ಆಂಜಿನಪ್ಪ ಓಂಕಾರಪ್ಪ ಇನ್ನು ಅನೇಕ ರೈತ ಮುಖಂಡರುಗಳು ಭಾಗವಹಿಸಿದ್ದರು
